ಶನಿವಾರಸಂತೆ, ಜು. ೧: ಸಮೀಪದ ಕೊಡ್ಲಿಪೇಟೆ ಡಿಸಿಸಿ ಬ್ಯಾಂಕಿನ ಶಾಖಾ ಕಚೇರಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಶತಮಾನೋತ್ಸವ ಪ್ರಯುಕ್ತ ಸರಳ ಕಾರ್ಯಕ್ರಮ ನಡೆಯಿತು. ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾಂಕಿನ ವ್ಯವಸ್ಥಾಪಕ ಎಂ.ಕೆ. ವೆಂಕಟೇಶ್, ಸಹಾಯಕ ವ್ಯವಸ್ಥಾಪಕ ಜಿ.ಆರ್. ಬಲರಾಂ, ಸಿಬ್ಬಂದಿ ಲಲಿತಾ ಕುಮಾರಿ, ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಮ್ಮಯ್ಯ, ವ್ಯವಸ್ಥಾಪಕ ಸುರೇಶ್, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಯತೀಶ್ ಕುಮಾರ್ ಇತರರು ಹಾಜರಿದ್ದರು.