ಮಡಿಕೇರಿ, ಜು. ೧: ಕೊಡಗು ಜಿಲ್ಲೆಗೆ ದಾನಿಗಳ ಮೂಲಕ ಬಂದಿರುವ ಲಕ್ಷಾಂತರ ಮೌಲ್ಯದ ಉಪಕರಣಗಳಿಗೆ ಸಂಬAಧಿಸಿದAತೆ ಇದರ ವಾಸ್ತವಾಂಶ ಏನಾಗಿದೆ ಎಂಬ ಕುರಿತಾಗಿ ಸೂಕ್ತ ಮಾಹಿತಿ ಒದಗಿಸಲು ಹಲವು ಪ್ರಮುಖರು ಒತ್ತಾಯಿಸಿದ್ದಾರೆ.
‘ಶಕ್ತಿ’ಯಲ್ಲಿ ಜೂನ್ ೨೮ ರಂದು ಪ್ರಕಟಗೊಂಡಿರುವ ವರದಿಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಇವರುಗಳು ಈ ಬಗ್ಗೆ ವಿವರ ಬಹಿರಂಗಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತ್ಯೇಕ ಹೇಳಿಕೆಗಳನ್ನು ಇವರು ನೀಡಿದ್ದಾರೆ.
ಜೆ.ಡಿ.ಎಸ್.: ಜಿಲ್ಲಾಸ್ಪತ್ರೆ ಸೇರಿದಂತೆ ಕೊಡಗಿನ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಕೊಡುಗೆಯಾಗಿ ನೀಡಿದ ವೈದ್ಯಕೀಯ ಉಪಕರಣಗಳು ಮತ್ತು ಇತರ ಸಲಕರಣೆಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿಯನ್ನು ಬಹಿರಂಗ ಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಎಚ್ಚರಿಕೆ ನೀಡಿದ್ದಾರೆ.
ಜನರಿಗೆ ಸೂಕ್ತ ಮಾಹಿತಿ ನೀಡದೆ ಇದ್ದಲ್ಲಿ ಜೆ.ಡಿ.ಎಸ್. ವತಿಯಿಂದ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಖಿಲ ಕೊಡವ ಸಮಾಜ ಯೂತ್ ವಿಂಗ್: ದಾನವಾಗಿ ಬಂದಿರುವ ಕೊರೊನಾ ಸಂಕಷ್ಟ ಕಾಲದ ನೆರವನ್ನು ಬಹಿರಂಗ ಘೋಷಿಸಲು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ ಮಾಡಿದೆ.
ಜಿಲ್ಲಾಡಳಿತ ಹಾಗೂ ಸಂಬAಧಪಟ್ಟವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಗ್ರಹಿಸಿದ್ದಾರೆ.
ಈ ನೆರವು ಜಿಲ್ಲೆಗಾಗಿ, ಜಿಲ್ಲೆಯ ಜನರಿಗಾಗಿ ಬಂದಿದೆ ಹೊರತು ಉಗ್ರಾಣದಲ್ಲಿಡಲು ಅಥವಾ ಕೆಲವರು ಇದನ್ನು ದುರ್ಬಳಕೆ ಮಾಡಿಕೊಳ್ಳಲು ಅಲ್ಲ. ಕೂಡಲೇ ಈ ಬಗ್ಗೆ ಸಾರ್ವಜನಿಕವಾಗಿ ಸಂಪೂರ್ಣ ಮಾಹಿತಿ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ: ಖಂಡಿತವಾಗಿಯೂ ಕೊಡಗಿನ ಜನತೆಗೆ ಸರ್ಕಾರ ಈ ಮಾಹಿತಿಯನ್ನು ಒದಗಿಸಲೇಬೇಕಾಗಿದೆ. ಕೊಡಗಿನ ಮೇಲಿನ ಅಭಿಮಾನದಿಂದ ನೂರಾರು ದಾನಿಗಳು ಕೊಡಗು ಜಿಲ್ಲೆಯ ನಾಗರಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಲಕ್ಷಾಂತರ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೋವಿಡ್ ಸಂಕಷ್ಟ ಕಾಲದಲ್ಲಿ ಕೊಡುಗೆಯಾಗಿ ನೀಡಿದ್ದಾರೆ. ಹೀಗಾಗಿ ೧೫ ತಿಂಗಳಿನಿAದ ಕೊಡಗಿನ ಆರೋಗ್ಯ ಇಲಾಖೆ, ಮೆಡಿಕಲ್ ಕಾಲೇಜಿಗೆ ಯಾವ ದಾನಿಗಳು, ಎಷ್ಟು ಮೌಲ್ಯದ, ಯಾವೆಲ್ಲಾ ಉಪಕರಣಗಳನ್ನು ನೀಡಿದ್ದಾರೆ. ಈ ಉಪಕರಣಗಳ ಬಳಕೆ ಹೇಗೆ ಆಗುತ್ತಿದೆ. ಯಾವೆಲ್ಲಾ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಪಕರಣಗಳನ್ನು ನೀಡಿದ್ದಾರೆ ಎಂಬ ಮಾಹಿತಿಯೂ ಕೊಡಗಿನ ಜನತೆಗೆ ಪಾರದರ್ಶಕವಾಗಿ ವಿವರ ಲಭಿಸಬೇಕಾಗಿದೆ ಎಂದು ಸರಿತಾ ಪೂಣಚ್ಚ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಜುಲೈ ೧೦ ರೊಳಗಾಗಿ ಕೊಡಗಿಗೆ ಲಭಿಸಿದ ವೈದ್ಯಕೀಯ ಉಪಕರಣಗಳ ಸಮರ್ಪಕ ಮಾಹಿತಿ ಲಭಿಸದೇ ಇದ್ದಲ್ಲಿ, ಈ ಬಗ್ಗೆ ಕಾಂಗ್ರೆಸ್ ಮುಂದಿನ ಹೋರಾಟ ಕೈಗೊಳ್ಳಲಿದೆ. ಜಿಲ್ಲೆಯ ಜನತೆಯಲ್ಲಿ ಮೂಡಿರುವ ಸಂಶಯಗಳನ್ನು ಕೂಡಲೇ ಶಾಸಕರು, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ, ಮೆಡಿಕಲ್ ಕಾಲೇಜಿನ ಡೀನ್ ಪರಿಹರಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.