ಮಡಿಕೇರಿ, ಜೂ. ೩೦: ಜೂನ್ ೧೦ರಂದು ವೀರಾಜಪೇಟೆಯಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಇದೀಗ ಮತ್ತೊಂದು ತಿರುವು ದೊರೆತಿದೆ. ಪ್ರಕರಣ ವಿಚಾರಣೆಯನ್ನು ನಡೆಸುತ್ತಿರುವ ಸಿ.ಐ.ಡಿ. ಇದೀಗ ಘಟನೆಗೆ ಸಂಬAಧಿಸಿದAತೆ ಸೆಕ್ಷನ್ ೩೦೨ರಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದೆ. ತನಿಖೆ ಮುಂದುವರೆದಿದ್ದು, ಸಾವಿನ ಬಗ್ಗೆ ನಿಖರವಾದ ಕಾರಣ ಅರಿಯಲು ಎಫ್.ಎಸ್.ಎಲ್. ವರದಿಗಾಗಿ ಕಾಯಲಾಗುತ್ತಿದೆ. ಈ ವರದಿ ಸದ್ಯದಲ್ಲಿ ಬರುವ ನಿರೀಕ್ಷೆಯಿದ್ದು, ಇದರ ನಂತರ ಮುಂದಿನ ಕ್ರಮ ಜರುಗಲಿದೆ ಎಂದು ತಿಳಿದುಬಂದಿದೆ. ತಾ. ೧೦ರಂದು ರಾತ್ರಿ ಪೊಲೀಸರಿಂದ ರಾಯ್ ಮೇಲೆ ಹಲ್ಲೆ ನಡೆದಿತ್ತು.
ಮಾನಸಿಕ ಅಸ್ವಸ್ಥತೆಗೊಳಗಾಗಿದ್ದರೆನ್ನಲಾಗಿದ್ದ ರಾಯ್ ಅವರ ಮೇಲೆ ದೌರ್ಜನ್ಯ ನಡೆದಿದೆ ಎಂದು ಸಂಬAಧಿತರು ಆರೋಪಿಸಿದ್ದರು. ಗಾಯಗೊಂಡಿದ್ದ ಅವರು ಮರುದಿನ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಿದ್ದರು. ವೀರಾಜಪೇಟೆಗೆ ಭೇಟಿ ನೀಡಿದ್ದ ಐ.ಜಿ.ಪಿ. ಪ್ರವೀಣ್ ಮಧುಕರ್ ಪವಾರ್ ಒಟ್ಟು ೮ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ್ದಲ್ಲದೆ, ಪ್ರಕರಣದ ತನಿಖೆಯನ್ನು ಸಿ.ಐ.ಡಿ.ಗೆ ಒಪ್ಪಿಸಲಾಗಿತ್ತು.
ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಸಿಐಡಿಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ತಪ್ಪಿತಸ್ಥರ ಬಂಧನಕ್ಕೆ ಒತ್ತಾಯಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿದ್ದು, ಸಾವಿನ ಕಾರಣವನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳುವ ಸಲುವಾಗಿ ರಾಯ್ ಹಲ್ಲೆಗೊಳಗಾದ ದಿನ ಧರಿಸಿದ್ದ ರಕ್ತದ ಕಲೆಗಳಿದ್ದ ಬಟ್ಟೆ ಹಾಗೂ ದೇಹದೊಳಗಿನ ಕೆಲವೊಂದು ಅಂಶಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್.ಎಸ್.ಎಲ್) ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಎಫ್.ಎಸ್.ಎಲ್ ವರದಿ ಬಂದ ಬಳಿಕ ಸಾವಿನ ಕಾರಣ ವೈಜ್ಞಾನಿಕವಾಗಿ ತಿಳಿಯಲಿದೆ. ಅದಲ್ಲದೆ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ತಪ್ಪಿತಸ್ಥರ ಬಂಧನವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎ.ಎಸ್. ಪೊನ್ನಣ್ಣ ‘ಶಕ್ತಿ'ಗೆ ತಿಳಿಸಿದ್ದಾರೆ.
ಶೀಘ್ರ ಕ್ರಮಕ್ಕೆ ಆಗ್ರಹ : ವೀರಾಜಪೇಟೆಯಲ್ಲಿ ನಡೆದ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಕೂಡಿಗೆಯ ಪವಿತ್ರ ಕುಟುಂಬ ದೇವಾಲಯ ಗುರುಗಳ ಸಮ್ಮುಖದಲ್ಲಿ ಸಭೆ ಸೇರಿ ಸಾವಿನ ವಿಚಾರಕ್ಕೆ ಖಂಡನೆ ವ್ಯಕ್ತಪಡಿಸಲಾಯಿತು.
(ಮೊದಲ ಪುಟದಿಂದ) ಅಲ್ಲದೆ ರಾಯ್ ಡಿಸೋಜ ಅವರ ಹತ್ಯೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಗೃಹ ಸಚಿವಾಲಯದವರು ಕಾನೂನಾತ್ಮಕ ನ್ಯಾಯ ದೊರಕಿಸಿಕೊಡುವಲ್ಲಿ ವಿಳಂಬವಾಗಿರುವುದರಿAದ ಆದಷ್ಟು ಬೇಗನೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಂಡು ಮೃತರ ಕುಟುಂಬಕ್ಕೆ ಶೀಘ್ರವಾಗಿ ನ್ಯಾಯ ದೊರಕಿಸಿ ಕೊಡಬೇಕೆಂದು ದೇವಾಲಯದ ವತಿಯಿಂದ ಒತ್ತಾಯಿಸಲಾಗಿದೆ.
ಸಭೆಯಲ್ಲಿ ಪವಿತ್ರ ಕುಟುಂಬ ದೇವಾಲಯ ಧರ್ಮಾಧಿಕಾರಿ ಜಾನ್ ಡಿಕುನ್, ಸಮಿತಿಯ ಸದಸ್ಯರಾದ ಕೆ.ಎ. ಪೀಟರ್, ನೆವಿಲ್ ಅಂತೋಣಿ, ಸನ್ನಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ, ಫಿಲೋಮಿನಾ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.