ಮಡಿಕೇರಿ, ಜೂ. ೩೦: ಕೊಡಗು ಮೂಲದ ವೈದ್ಯರಾದ ಪಳಂಗೋಟು ಡಾ. ಜಗದೀಶ್ ಮಾಚಯ್ಯ ಅವರಿಗೆ ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ ಡಾ.ಬಿ.ಸಿ. ರಾಯ್ ಪ್ರಶಸ್ತಿ ಲಭಿಸಿದೆ. ಇದು ಭಾರತದಲ್ಲಿ ವೈದ್ಯಕೀಯ ಕ್ಷೇತದಲ್ಲಿನ ಸೇವೆಗಾಗಿ ಕೊಡಲ್ಪಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಪಳಂಗೋಟು ಡಾ. ಜಗದೀಶ್‌ಮಾಚಯ್ಯ ಅವರು ಮೂಲತಃ ಭಾಗಮಂಡಲದ ಕೋರಂಗಾಲದವರು. ತಮ್ಮ ವೈದ್ಯಕೀಯ ಪದವಿಯನ್ನು ಹುಬ್ಬಳ್ಳಿಯ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿಯೂ ಮತ್ತು ಮಕ್ಕಳ ತಜ್ಞ ವಿಭಾಗದಲ್ಲಿ ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಪಡೆದ ಡಾ. ಜಗದೀಶ್ ವೈದ್ಯಕೀಯ ವಿದ್ಯಾರ್ಥಿ ಜೀವನದಲ್ಲಿ ಏಳು ಬಂಗಾರದ ಪದಕಗಳನ್ನು ಪಡೆದಿದ್ದಾರೆ. ಕೆಲವು ವರ್ಷಗಳ ಕಾಲ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಗದೀಶ್ ಅವರು ನಂತರ ಮಂಡ್ಯದಲ್ಲಿ ಸ್ತಿçÃರೋಗ ತಜ್ಞೆಯಾಗಿರುವ ತಮ್ಮ ಮಡದಿ ಅನುಪಮಾ ಜಗದೀಶ್ ಅವರ ಜೊತೆಗೂಡಿ ನರ್ಸಿಂಗ್ ಹೋಮ್ ಸ್ಥಾಪಿಸಿ ಮಕ್ಕಳ ತಜ್ಞ ವೈದ್ಯರಾಗಿ ಹೆಸರು ಮಾಡಿದ್ದಾರೆ.