ಮಡಿಕೇರಿ, ಜೂ. ೩೦: ಇತಿಹಾಸದ ಮೂಲ ಬೇರು ಜಾನಪದ. ಇಂತಹ ಇತಿಹಾಸ ಅಡಗಿರುವ ಬಾಳೋಪಾಟ್ ಕೊಡವ ಬುಡಕಟ್ಟು ಜನಾಂಗದ ಸಂಸ್ಕೃತಿಯ ತಳ. ಇಂತಹ ಬಾಳೋಪಾಟ್ ಇಂದು ಅರಿವಿನ ಕೊರತೆಯಿಂದ ನಶಿಸುತ್ತಿದ್ದು, ಇದರ ಪುನರುತ್ಥಾನಕ್ಕಾಗಿ ಕೊಡವ ಕುಟುಂಬಗಳ ನಡುವೆ ಬಾಳೋಪಾಟ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಮಾಹಿತಿ ನೀಡಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು, ಯಾವುದೇ ಒಂದು ಜನಾಂಗ ಉಳಿಯಬೇಕಾದರೆ ಅದರ ಭಾಷೆಯ ಉಳಿವು ಅತ್ಯಗತ್ಯ. ಭಾಷೆ ನಶಿಸಿದರೆ ಜನಾಂಗದ ಉಳಿವು ಅಸಾಧ್ಯ. ಹಾಗೇ ಕೊಡವ ಭಾಷೆಯೂ ಕೂಡ ಲಿಪಿಲಿಖಿತ ನಿಯಾಮಾವಳಿ ಬರುವುದಕ್ಕಿಂತಲೂ ಮೊದಲು, ಪ್ರಚಲಿತದಲ್ಲಿದ್ದಂತ ಪ್ರಪಂಚದ ಕೆಲವೇ ಕೆಲವು ಭಾಷೆಗಳಲ್ಲಿ ಒಂದು. ಹಾಗಾಗಿ ಕೊಡವ ಭಾಷೆಯು ಅಲಿಖಿತರೂಪದ ಜಾನಪದೀಯ ಬುಡಕಟ್ಟು ಸಂಸ್ಕೃತಿಯನ್ನೇ ಇಂದಿಗೂ ಪಾಲಿಸುತ್ತಿದೆ. ಈ ಜಾನಪದಿಯ ಸಂಸ್ಕೃತಿಯಲ್ಲಿ ಬಾಳೋಪಾಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಬಾಳೋ ಪಾಟಿನ ದೇಶಕೆÀಟ್ಟ್ ಪಾಟಿನಲ್ಲಿ ಇಡೀ ಸೃಷ್ಟಿಯ ಚಿತ್ರಣ ಅಡಗಿದ್ದು. ಈ ದೇಶಕೆÀಟ್ಟ್ ಪಾಟನ್ನು ಪ್ರತಿಯೊಬ್ಬ ಕೊಡವರೂ ಅರಿತಿರಬೇಕು. ಈ ಕೌಟುಂಬಿಕ ಸ್ಪರ್ಧೆಯ ಮೂಲಕ ಪ್ರತೀ ಒಕ್ಕದಲ್ಲಿಯೂ ದೇಶಕೆಟ್ಟ್ ಪಾಟ್‌ನ ಅರಿವಿನೊಂದಿಗೆ, ಬಾಳೋಪಾಟಿನ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ ಎಂದಿದ್ದಾರೆ.

ಕೌಟುಂಬಿಕ ಬಾಳೋಪಾಟ್ ಸ್ಪರ್ಧೆಯು ಅಂತರ್ಜಾಲದಲ್ಲಿ ನಡೆಯಲಿದ್ದು ಮೊದಲಿಗೆ ಸ್ಪರ್ಧಿಸುವ ಕುಟುಂಬ ತಂಡಗಳು ತಮ್ಮ ಹೆಸರನ್ನು ಜುಲೈ ೧೫ ರೊಳಗೆ ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ದೇಶಕೆಟ್ಟ್ ಪಾಟನ್ನು ಮಾತ್ರ ಹಾಡಬೇಕು. ಹಾಡಲು ಸ್ಪರ್ಧಿಗಳಿಗೆ ೩೦ ನಿಮಿಷಗಳ ಮಡಿಕೇರಿ, ಜೂ. ೩೦: ಇತಿಹಾಸದ ಮೂಲ ಬೇರು ಜಾನಪದ. ಇಂತಹ ಇತಿಹಾಸ ಅಡಗಿರುವ ಬಾಳೋಪಾಟ್ ಕೊಡವ ಬುಡಕಟ್ಟು ಜನಾಂಗದ ಸಂಸ್ಕೃತಿಯ ತಳ. ಇಂತಹ ಬಾಳೋಪಾಟ್ ಇಂದು ಅರಿವಿನ ಕೊರತೆಯಿಂದ ನಶಿಸುತ್ತಿದ್ದು, ಇದರ ಪುನರುತ್ಥಾನಕ್ಕಾಗಿ ಕೊಡವ ಕುಟುಂಬಗಳ ನಡುವೆ ಬಾಳೋಪಾಟ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಮಾಹಿತಿ ನೀಡಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು, ಯಾವುದೇ ಒಂದು ಜನಾಂಗ ಉಳಿಯಬೇಕಾದರೆ ಅದರ ಭಾಷೆಯ ಉಳಿವು ಅತ್ಯಗತ್ಯ. ಭಾಷೆ ನಶಿಸಿದರೆ ಜನಾಂಗದ ಉಳಿವು ಅಸಾಧ್ಯ. ಹಾಗೇ ಕೊಡವ ಭಾಷೆಯೂ ಕೂಡ ಲಿಪಿಲಿಖಿತ ನಿಯಾಮಾವಳಿ ಬರುವುದಕ್ಕಿಂತಲೂ ಮೊದಲು, ಪ್ರಚಲಿತದಲ್ಲಿದ್ದಂತ ಪ್ರಪಂಚದ ಕೆಲವೇ ಕೆಲವು ಭಾಷೆಗಳಲ್ಲಿ ಒಂದು. ಹಾಗಾಗಿ ಕೊಡವ ಭಾಷೆಯು ಅಲಿಖಿತರೂಪದ ಜಾನಪದೀಯ ಬುಡಕಟ್ಟು ಸಂಸ್ಕೃತಿಯನ್ನೇ ಇಂದಿಗೂ ಪಾಲಿಸುತ್ತಿದೆ. ಈ ಜಾನಪದಿಯ ಸಂಸ್ಕೃತಿಯಲ್ಲಿ ಬಾಳೋಪಾಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಬಾಳೋ ಪಾಟಿನ ದೇಶಕೆÀಟ್ಟ್ ಪಾಟಿನಲ್ಲಿ ಇಡೀ ಸೃಷ್ಟಿಯ ಚಿತ್ರಣ ಅಡಗಿದ್ದು. ಈ ದೇಶಕೆÀಟ್ಟ್ ಪಾಟನ್ನು ಪ್ರತಿಯೊಬ್ಬ ಕೊಡವರೂ ಅರಿತಿರಬೇಕು. ಈ ಕೌಟುಂಬಿಕ ಸ್ಪರ್ಧೆಯ ಮೂಲಕ ಪ್ರತೀ ಒಕ್ಕದಲ್ಲಿಯೂ ದೇಶಕೆಟ್ಟ್ ಪಾಟ್‌ನ ಅರಿವಿನೊಂದಿಗೆ, ಬಾಳೋಪಾಟಿನ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ ಎಂದಿದ್ದಾರೆ.

ಕೌಟುಂಬಿಕ ಬಾಳೋಪಾಟ್ ಸ್ಪರ್ಧೆಯು ಅಂತರ್ಜಾಲದಲ್ಲಿ ನಡೆಯಲಿದ್ದು ಮೊದಲಿಗೆ ಸ್ಪರ್ಧಿಸುವ ಕುಟುಂಬ ತಂಡಗಳು ತಮ್ಮ ಹೆಸರನ್ನು ಜುಲೈ ೧೫ ರೊಳಗೆ ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ದೇಶಕೆಟ್ಟ್ ಪಾಟನ್ನು ಮಾತ್ರ ಹಾಡಬೇಕು.