ಸೋಮವಾರಪೇಟೆ, ಜೂ. ೩೦: ಕಳೆದ ೨೦೧೮ರ ಮಹಾಮಳೆ, ಪ್ರವಾಹ, ಭೂಕುಸಿತದಿಂದ ಸ್ವತಃ ನಷ್ಟವನ್ನು ಅನುಭವಿಸಿದ ಶಾಸಕ ಅಪ್ಪಚ್ಚು ರಂಜನ್ ಅವರು, ಕೊರೊನಾ ಎರಡನೇ ಅಲೆಯ ಸಂದರ್ಭ ತಮ್ಮ ತೋಟದಲ್ಲಿ ಬಿದ್ದಿದ್ದ ಬೀಟೆ ಸೇರಿದಂತೆ ಇನ್ನಿತರ ಮರಗಳನ್ನು ಕಾನೂನು ಪ್ರಕಾರ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಕ್ಷೇತ್ರದಾದ್ಯಂತ ಮುಂಚೂಣಿ ಕಾರ್ಯಕರ್ತರಿಗೆ ಕಿಟ್ ವಿತರಿಸಿದ್ದಾರೆ.

ಶಾಸಕ ಅಪ್ಪಚ್ಚುರಂಜನ್ ಅವರಿಗೆ ಸೇರಿದ ಹಟ್ಟಿಹೊಳೆ, ಹಾಡಗೇರಿ, ಕುಂಬೂರು ಭಾಗದ ಕಾಫಿ ತೋಟದ ನಡುವೆ ಬೆಳೆಸಿದ್ದ ಬೀಟೆ, ಸಿಲ್ವರ್ ಸೇರಿದಂತೆ ಇನ್ನಿತರ ಮರಗಳು ಅತಿವೃಷ್ಟಿ, ಭೂ ಕುಸಿತದಿಂದ ನೆಲಕ್ಕಚ್ಚಿದ್ದವು.

ಇವುಗಳನ್ನು ಅರಣ್ಯ ಇಲಾಖೆಯ ಕಾನೂನು ಪ್ರಕಾರ ಕುಶಾಲನಗರದ ಆನೆಕಾಡು ಮರ ಸಂಗ್ರಹಾಲಯಕ್ಕೆ ಸಾಗಿಸಿ, ಅಲ್ಲಿಂದ ಕಾನೂನು ಪ್ರಕಾರ ಮಾರಾಟ ಮಾಡಿದ್ದರಿಂದ ರೂ. ೧೦ ಲಕ್ಷ ಹಣ ಲಭಿಸಿತ್ತು. ಇದರೊಂದಿಗೆ ತಮ್ಮ ಕೈಯಿಂದ ೮ ಲಕ್ಷ ಹಣ ಸೇರಿಸಿ ಒಟ್ಟು ರೂ. ೧೮ ಲಕ್ಷ ವೆಚ್ಚದಲ್ಲಿ ಮಡಿಕೇರಿ ಕ್ಷೇತ್ರದಾದ್ಯಂತ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಸಂಘ ಸಂಸ್ಥೆಗಳ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ.

ಈಗಾಗಲೇ ಸೋಮವಾರಪೇಟೆ ತಾಲೂಕಿನ ೪೦ ಗ್ರಾಮ ಪಂಚಾಯಿತಿ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆ್ಯಂಬ್ಯುಲೆನ್ಸ್ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು, ಪ.ಪಂ.ಯ ಪೌರ ಕಾರ್ಮಿಕರು, ಸಿಬ್ಬಂದಿಗಳು, ವಾಟರ್ ಮೆನ್, ಪಂಚಾಯಿಸಿ ಸಿಬ್ಬಂದಿಗಳೂ ಸೇರಿದಂತೆ ಪತ್ರಕರ್ತರು, ಛಾಯಾ ಗ್ರಾಹಕರು, ಅರ್ಚಕರಿಗೆ ಕಿಟ್‌ಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಗ್ರಾ.ಪಂ.ಯಿAದ ಮಾಹಿತಿ ತರಿಸಿಕೊಂಡು, ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೀಲ್‌ಡೌನ್ ಆಗಿರುವ ಕುಟುಂಬಗಳಿಗೂ ತಲಾ ಒಂದರAತೆ ಕಿಟ್ ವಿತರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ರಂಜನ್ ನೆರವು ಒದಗಿಸಿದ್ದಾರೆ. ಒಟ್ಟು ರೂ. ೧೮ ಲಕ್ಷ ಸಂಸ್ಥೆಗಳ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ.

ಈಗಾಗಲೇ ಸೋಮವಾರಪೇಟೆ ತಾಲೂಕಿನ ೪೦ ಗ್ರಾಮ ಪಂಚಾಯಿತಿ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆ್ಯಂಬ್ಯುಲೆನ್ಸ್ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು, ಪ.ಪಂ.ಯ ಪೌರ ಕಾರ್ಮಿಕರು, ಸಿಬ್ಬಂದಿಗಳು, ವಾಟರ್ ಮೆನ್, ಪಂಚಾಯಿಸಿ ಸಿಬ್ಬಂದಿಗಳೂ ಸೇರಿದಂತೆ ಪತ್ರಕರ್ತರು, ಛಾಯಾ ಗ್ರಾಹಕರು, ಅರ್ಚಕರಿಗೆ ಕಿಟ್‌ಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಗ್ರಾ.ಪಂ.ಯಿAದ ಮಾಹಿತಿ ತರಿಸಿಕೊಂಡು, ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೀಲ್‌ಡೌನ್ ಆಗಿರುವ ಕುಟುಂಬಗಳಿಗೂ ತಲಾ ಒಂದರAತೆ ಕಿಟ್ ವಿತರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ರಂಜನ್ ನೆರವು ಒದಗಿಸಿದ್ದಾರೆ. ಒಟ್ಟು ರೂ. ೧೮ ಲಕ್ಷ ತೊರೆದು ಸೋಂಕಿತ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆಗೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೋಂಕಿತರ ಮನೆಗಳಿಗೆ ತೆರಳಿದ ಸಂದರ್ಭ ಹಲವಷ್ಟು ಅವಮಾನ, ಬೈಗುಳಗಳನ್ನು ಕೇಳಿದ್ದಾರೆ. ಆದರೂ ಸಹ ತಮ್ಮ ಕರ್ತವ್ಯವನ್ನು ಸೇವಾ ಮನೋಭಾವದಿಂದ ನಿರ್ವಹಿಸಿದ್ದು, ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಿದ್ದರಿಂದ ಇದೀಗ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ.

ಇಂತಹ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಹೂಗುಚ್ಛ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡುವ ಬದಲು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ ಕೃತಜ್ಞತೆ ಸಲ್ಲಿಸುವುದು ಹಾಗೂ ಮುಂದಿನ ದಿನಗಳಲ್ಲಿ ಕೆಲಸ ಮಾಡಲು ಇನ್ನಷ್ಟು ಮಾನಸಿಕ ಸ್ಥೆöÊರ್ಯ ತುಂಬುವ ಸಲುವಾಗಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಸ್ವತಃ ರೂ. ೧.೨೫ ಕೋಟಿ ಸಾಲಗಾರರೂ ಆಗಿರುವ ಶಾಸಕರು, ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ರೂ. ೧೮ ಲಕ್ಷ ವೆಚ್ಚ ಮಾಡಿ ೩ ಸಾವಿರ ಕುಟುಂಬಕ್ಕೆ ಕಿಟ್ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಿಜೆಪಿ ಪ್ರಮುಖರಾದ ಕಿಬ್ಬೆಟ್ಟ ಮಧು, ನೇಗಳ್ಳೆ ಜೀವನ್, ಎಸ್.ಆರ್. ಸೋಮೇಶ್, ಶರತ್‌ಚಂದ್ರ ಸೇರಿದಂತೆ ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಸಕರೊಂದಿಗೆ ಪ್ರತಿದಿನ ತೆರಳಿ ಕಿಟ್ ನೀಡುವಲ್ಲಿ ಸಹಕಾರ ಕೊಟ್ಟಿದ್ದಾರೆ.

ತಾಲೂಕಿನ ಕೊನೆಯ ದಿನದ ಕಾರ್ಯಕ್ರಮದಲ್ಲಿ ಗರ್ವಾಲೆ, ಕಿರಗಂದೂರು, ಐಗೂರು, ಬೇಳೂರು, ಚೌಡ್ಲು, ಹಾನಗಲ್ಲು, ಬೆಟ್ಟದಳ್ಳಿ, ಶಾಂತಳ್ಳಿ, ತೋಳೂರುಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಇಂದು ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜಿ ಸದಸ್ಯರುಗಳಾದ ತಂಗಮ್ಮ, ಧರ್ಮಪ್ಪ, ಬಿಜೆಪಿ ಯುವ ಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.