ಸೋಮವಾರಪೇಟೆ, ಜೂ.೩೦: ತಾ. ೨೮ರಂದು ಕಾಫಿ ತೋಟದ ನಡುವೆ ಕಿರಗಂದೂರು ಗ್ರಾಮದ ಕೃಷಿಕ ಕುಶಾಲಪ್ಪ ಅವರ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ತಾ. ೨೮ರಂದು ಕಿರಗಂದೂರಿನ ಕಾಫಿ ತೋಟದ ಒಳಭಾಗದಲ್ಲಿ ರಕ್ತಸಿಕ್ತವಾಗಿದ್ದ ಸ್ಥಿತಿಯಲ್ಲಿ ಕುಶಾಲಪ್ಪ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯ ಕೆಲವರು ಇದು ಕಾಡುಹಂದಿಯ ಧಾಳಿ ಎಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖಾಧಿಕಾರಿಗಳಿಗೆ ಮೃತದೇಹ ಇದ್ದ ಸ್ಥಳದ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ಸಂಶಯ ಮೂಡಿತ್ತು. ಕಾಡುಹಂದಿ ಮನುಷ್ಯನ ಮೇಲೆ ಧಾಳಿ ನಡೆಸಿದ ಯಾವುದೇ ಕುರುಹುಗಳು ಅಲ್ಲಿ ಪತ್ತೆಯಾಗಿರಲಿಲ್ಲ; ರಕ್ತವೂ ಚೆಲ್ಲಾಡಿರಲಿಲ್ಲ.

ಘಟನೆಯ ಬಗ್ಗೆ ಮೃತ ಕುಶಾಲಪ್ಪ ಅವರ ಪತ್ನಿ

(ಮೊದಲ ಪುಟದಿಂದ) ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಂತರದಲ್ಲಿ ಕುಶಾಲಪ್ಪ ಅವರ ಸಾವಿಗೆ ಸಂಬAಧಿಸಿದAತೆ ಹಲವಷ್ಟು ಊಹಾಪೋಹಗಳು ಹರಿದಾಡಲಾರಂಭಿಸಿದವು. ಪ್ರಕರಣದ ಮೂಲ ಕಾರಣ ಬೇರೇನೋ ಇದೆ ಎಂಬ ಮಾತುಗಳು ಕೇಳಿಬಂದವು.

ಇದೀಗ ಸೋಮವಾರಪೇಟೆ ಪೊಲೀಸರು ಘಟನೆಗೆ ನಿಖರ ಕಾರಣ ಕಂಡುಕೊಳ್ಳುವ ಸಂಬAಧ ತನಿಖೆಯನ್ನು ಚುರುಕುಗೊಳಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಎದುರು ನೋಡುತ್ತಿದ್ದಾರೆ.

ಹೊಸತೋಟ ಸಮೀಪದ ಕಾಫಿ ಎಸ್ಟೇಟ್‌ನ ಕಾಡು ಪ್ರದೇಶದಲ್ಲಿ ಕಾಡುಹಂದಿಯನ್ನು ಬೇಟೆಯಾಡಿದ್ದು, ಗುಂಡು ಸರಿಯಾಗಿ ತಾಗದೇ ಗಾಯಗೊಂಡ ಕಾಡುಹಂದಿ ಕುಶಾಲಪ್ಪ ಅವರ ಮೇಲೆ ಧಾಳಿ ನಡೆಸಿದೆ. ಇದರಿಂದಾಗಿಯೇ ಕುಶಾಲಪ್ಪ ಸಾವನ್ನಪ್ಪಿದ್ದಾರೆ ಎಂದು ಕೆಲವರು ಸಂಶಯಿಸಿದರೆ, ಇನ್ನು ಕೆಲವರು ಗುಂಡು ಕುಶಾಲಪ್ಪ ಅವರಿಗೆ ತಗುಲಿ ದುರ್ಘಟನೆ ಸಂಭವಿಸಿದೆ. ಇದನ್ನು ಮರೆಮಾಚಲು ಇಷ್ಟೆಲ್ಲಾ ಸನ್ನಿವೇಶ ಸೃಷ್ಟಿಸಲಾಗಿದೆ ಎಂದು ತಮ್ಮ ತಮ್ಮಲ್ಲೇ ತರ್ಕ ಮಾಡುತ್ತಿದ್ದಾರೆ.

ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್ ಅವರುಗಳು ಪ್ರಕರಣದ ತನಿಖೆ ಕೈಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿರುವ ಕುಶಾಲಪ್ಪ ಅವರ ಸಾವಿನ ಬಗ್ಗೆ ಶೀಘ್ರದಲ್ಲೇ ಸತ್ಯಾಂಶ ಹೊರಗೆಳೆಯುವ ಪ್ರಯತ್ನದಲ್ಲಿದ್ದಾರೆ.

ಅಂದ ಹಾಗೆ, ಬೇಟೆಗೆ ತೆರಳಿದ ಸಹಚರರು, ಕೋವಿ ನೀಡಿದ ವ್ಯಕ್ತಿ, ಕಾಡುಹಂದಿಗೆ ಗುಂಡು ಹೊಡೆದ ಬೇಟೆಗಾರ, ಘಟನೆಯನ್ನು ಕಣ್ಣಾರೆ ಕಂಡ ಮಂದಿ, ಮೃತದೇಹವನ್ನು ಅಲ್ಲಿಂದ ಇಲ್ಲಿಗೆ ಸಾಗಿಸಿದ (?) ಸಹಪಾಠಿಗಳಲ್ಲಿ ಈಗಾಗಲೇ ಭಯ ಶುರುವಾಗಿದೆ! ಆ ಭಯ ಸಹಜವಾಗಿ ಮೂಡುವಂತದ್ದೇ!!

-ವಿಜಯ್