ಕೊಡ್ಲಿಪೇಟೆ, ಜೂ. ೨೯: ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆ ವತಿಯಿಂದ ಗಡಿ ಭಾಗದ ಶಾಂತಪುರ ಸೇತುವೆ ಸಮೀಪ ಜಿಲ್ಲೆಗೆ ಪ್ರವೇಶ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಿರ್ಮಿಸಲಾಗಿರುವ ಸ್ವಾಗತ ಫಲಕವನ್ನು ರೋಟರಿ ಜಿಲ್ಲಾ ರಾಜ್ಯಪಾಲ ರಂಗನಾಥ್ ಭಟ್ ಅನಾವರಣಗೊಳಿಸಿದರು. ನಂತರ ಎಸ್.ಕೆ.ಎಸ್. ಶಾಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ ಶೌಚಾಲಯ ಹಾಗೂ ಸ್ವಚ್ಛತಾ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಪಿ.ಕೆ. ರವಿ, ಹೇಮಾವತಿ ರೋಟರಿ ಅಧ್ಯಕ್ಷ ಹೆಚ್.ಎಂ. ದಿವಾಕರ್, ಕಾರ್ಯದರ್ಶಿ ಅಮೃತ್ ಕುಮಾರ್, ರೋಟೇರಿಯನ್ ಡಾ. ಉದಯ್ ಕುಮಾರ್, ನಿರ್ಗಮಿತ ಅಧ್ಯಕ್ಷ ಹೆಚ್.ಜೆ. ಪ್ರವೀಣ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.