ಸೋಮವಾರಪೇಟೆ, ಜೂ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಂರ‍್ರಾಷ್ಟಿçÃಯ ಶೌರ್ಯ ವಿಪತ್ತು ನಿವಾರಣಾ ಘಟಕದ ವಾರ್ಷಿಕೋತ್ಸವ ಅಂಗವಾಗಿ ಸಮೀಪದ ಕಲ್ಕಂದೂರು ಗ್ರಾಮದ ರುದ್ರಭೂಮಿಯಲ್ಲಿ ಶ್ರಮದಾನ ನಡೆಸಿ ವಿವಿಧ ಜಾತಿಯ ಸುಮಾರು ೫೦ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಸ್ವಯಂಸೇವಕರಾದ ದೀಕ್ಷಿತ್, ಉದಯಕುಮಾರ್, ನರೇಂದ್ರ, ಮನು, ಮಹೇಶ್, ಕುಮಾರ, ಲಿಂಗರಾಜು, ತಂಡದ ಸಂಯೋಜಕ ಶಿವಕುಮಾರ್, ಗ್ರಾ.ಪಂ. ಸದಸ್ಯ ವಿಜಯ್, ಯೋಜನೆಯ ಮೇಲ್ವಿಚಾರಕ ಸಂತೋಷ್, ಜ್ಞಾನವಿಕಾಸ ಕೇಂದ್ರದ ಪದ್ಮ ಉಪಸ್ಥಿತರಿದ್ದರು.