*ಗೋಣಿಕೊಪ್ಪ, ಜೂ. ೨೯: ತೋಟ ಕಾರ್ಮಿಕರ ಲಸಿಕೆ ಅಭಿಯಾನಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದರು.
ಸುಮಾರು ೨೫೦ಕ್ಕೂ ಹೆಚ್ಚು ತೋಟ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಮಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶಾಸಕರು ಗಿಡಕ್ಕೆ ನೀರು ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು.
ಲಸಿಕೆ ಪಡೆಯುವ ಫಲಾನುಭವಿ ಗಳನ್ನು ಉದ್ದೇಶಿಸಿ ಕೊರೊನಾ ತಡೆಗಟ್ಟಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರು ನಿಯಮವನ್ನು ಶಿಸ್ತುಬದ್ದವಾಗಿ ಪಾಲಿಸಿದರೆ ಕೊರೊನಾ ಬಾಧೆಯಿಂದ ಹೊರಬರಲು ಸಾಧ್ಯವಿದೆ ಎಂದರು.
ಲಸಿಕೆ ಪಡೆದ ನಂತರ ಯಾವುದೇ ಅಡ್ಡಪರಿಣಾಮಗಳು ಉಂಟಾಗು ವುದಿಲ್ಲ. ಊಹಾಪೋಹಗಳಿಗೆ ಕಿವಿಗೊಡದೆ ಲಸಿಕೆ ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕೆAದರು.
ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೋಡುಮಾಡ ಶರಿನ್ ಸುಬ್ಬಯ್ಯ, ಕುಟ್ಟ ಗ್ರಾ.ಪಂ. ಅಧ್ಯಕ್ಷ ತೀತಿರ ಗಣಪತಿ, ಉಪಾಧ್ಯಕ್ಷೆ ಪಿ.ಎಂ. ದಿವ್ಯಮನೋಜ್, ಸದಸ್ಯರಾದ ತೀರ್ಥಮಂಜುನಾಥ್, ಜೆ.ಡಿ. ಮಣಿ, ಜನಾರ್ಧನ, ಮೀನ, ಕರ್ಪಯ್ಯ, ಹೇಮ, ಶಾಂತಿ, ಪೊನ್ನಂಪೇಟೆ ಎ.ಪಿ.ಎಂ.ಎಸ್ ಅಧ್ಯಕ್ಷ ಮುದ್ದಿಯಡ ಮಂಜುಗಣಪತಿ, ಶಕ್ತಿ ಕೇಂದ್ರದ ಅಧ್ಯಕ್ಷ ತೀತಿರ ರಾಜ, ಕೆ. ಬಾಡಗ ಶಕ್ತಿ ಕೇಂದ್ರದ ಅಧ್ಯಕ್ಷ ಪೆಮ್ಮಣಮಾಡ ನವೀನ್, ಪಿ.ಡಿ.ಓ ಅನಿಲ್‌ಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ, ಮಂಚಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪೆರುಮಾಳ್, ವನವಾಸಿ ಕಲ್ಯಾಣ ಜಿಲ್ಲಾ ಸಂಚಾಲಕ ಹರೀಶ್ ಸೇರಿದಂತೆ ಕಾನೂರು ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಪ್ರಮುಖರು ಹಾಜರಿದ್ದರು.