ಪೊನ್ನಂಪೇಟೆ, ಜೂ. ೨೯: ಕೆಲವೊಮ್ಮೆ ಸಾವಿನಂಚಿಗೆ ತೆರಳುವ ವ್ಯಕ್ತಿಗಳ ಜೀವ ಉಳಿಸುವಲ್ಲಿ ರಕ್ತದಾನದ ಪಾತ್ರ ಅಮೂಲ್ಯವಾದದ್ದು. ಸರ್ವಶ್ರೇಷ್ಠವಾದ ರಕ್ತದಾನಕ್ಕೆ ಪ್ರತಿಫಲವಾಗಿ ನೀಡಲು ಭೂಮಂಡಲ ದಲ್ಲಿ ಯಾವುದು ಇಲ್ಲ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕರು ಮತ್ತು ಕೊಡಗು ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕಿನ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಅವರು ತಿಳಿಸಿದ್ದಾರೆ.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ರಕ್ತದಾನ-ಮಾನವಕುಲದ ಶ್ರೇಷ್ಠ ಸೇವೆ ಎಂಬ ವಿಷಯದ ಕುರಿತು ನಡೆದ ವೆಬಿನಾರ್‌ನಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ರಕ್ತದಾನದ ಕುರಿತು ಇಂದಿಗೂ ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಆದರೆ ರಕ್ತದಾನದಿಂದಾಗಿ ಮನುಷ್ಯನ ಆರೋಗ್ಯ ಸುಧಾರಿಸುತ್ತದೆ ಎಂಬುದು ವೈಜ್ಞಾನಿಕವಾದ ಕಟುಸತ್ಯವಾಗಿದೆ. ಆದ್ದರಿಂದ ಈ ೨೧ನೇ ಶತಮಾನದ ಲ್ಲಾದರೂ ರಕ್ತದಾನದ ಮಹತ್ವದ ಕುರಿತು ಬಹುದೊಡ್ಡ ಸಾಮಾಜಿಕ ಕ್ರಾಂತಿ ಆಗಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಇಂದು ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯ ರಕ್ತದಾನಿಗಳು ಇದ್ದಾರೆ. ಅವರೆಲ್ಲರೂ ವರ್ಷಕ್ಕೆ ಸಾಕಷ್ಟು ಬಾರಿ ರಕ್ತದಾನ ಮಾಡುತ್ತಿದ್ದಾರೆ. ಆದರೆ ಮೊದಲ ಬಾರಿ ರಕ್ತದಾನ ಮಾಡುವ ಜನರ ಸಂಖ್ಯೆ ಕೊಡಗಿನಲ್ಲಿ ಹೆಚ್ಚಾಗಬೇಕು ಎಂದು ಅವರು ಹೇಳಿದರು. ೧೮ ರಿಂದ ೬೫ ವರ್ಷ ಪ್ರಾಯದೊಳಗಿನ ಆರೋಗ್ಯವಂತ ಯಾವುದೇ ವ್ಯಕ್ತಿಗಳು ರಕ್ತದಾನ ಮಾಡಬಹುದು.

ಪುರುಷರು ಪ್ರತಿ ೩ ತಿಂಗಳಿಗೊಮ್ಮೆ ಮತ್ತು ಮಹಿಳೆಯರು ಪ್ರತಿ ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಂಡವರು ಪ್ರತಿ ಡೋಸ್ ಲಸಿಕೆ ಪಡೆದ ೧೪ ದಿನಗಳ ನಂತರ ಮತ್ತು ಕೋವಿಡ್ ಪಾಸಿಟಿವ್ ಆಗಿ ಗುಣಮುಖರಾದರು ೨೮ ದಿನಗಳ ನಂತರ ರಕ್ತ ನೀಡಬಹುದಾಗಿದೆ ಎಂದು ಡಾ. ಕರುಂಬಯ್ಯ ಮಾಹಿತಿ ನೀಡಿದರು.

ವೆಬಿನಾರ್‌ನಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯ ಜೇಸಿಸ್‌ನ ವಲಯ ೧೪ರ ವಲಯಾಧ್ಯಕ್ಷರಾದ ಜೆಸಿಐ ಸೆನೆಟರ್ ಭರತ್ ಎನ್. ಆಚಾರ್ಯ ಅವರು ಮಾತನಾಡಿ, ರಕ್ತದಾನ ದಿಂದಾಗಿ ಆರೋಗ್ಯವನ್ನು ವೃದ್ಧಿಸಿ ಕೊಳ್ಳಬಹುದು.

ನಿರಂತರ ರಕ್ತ ದಾನದಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದಲ್ಲದೆ ದೇಹದಲ್ಲಿ ಕೊಲೆಸ್ಟಾçಲ್ ಮಟ್ಟ ಕಡಿಮೆಯಾಗಿ ಹೃದಯಾಘಾತವನ್ನು ತಪ್ಪಿಸಬಹುದು ಎಂಬುದು ಸಂಶೋಧನೆಯಿAದ ದೃಢಪಟ್ಟ ವೈಜ್ಞಾನಿಕ ಸತ್ಯವಾಗಿದೆ.

ಈ ಕಾರಣದಿಂದಾದರೂ ಆರೋಗ್ಯವಂತ ವ್ಯಕ್ತಿಗಳು ಕನಿಷ್ಟ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಿದರೆ ದೇಶದಲ್ಲಿ ರಕ್ತದ ಕೊರತೆ ಎದುರಾಗುವುದಿಲ್ಲ ಎಂದು ತಿಳಿಸಿದರು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅಜ್ಜಿಕುಟ್ಟೀರ ಎಸ್. ನರೇನ್ ಕಾರ್ಯಪ್ಪ, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗದ ಘಟಕಾಧ್ಯಕ್ಷ ಎಂ.ಎನ್. ವನಿತ್ ಕುಮಾರ್, ಘಟಕದ ಪೂರ್ವ ಅಧ್ಯಕ್ಷ ಬಿ.ಈ. ಕಿರಣ್, ಕಾರ್ಯದರ್ಶಿ ಎ.ಪಿ. ದಿನೇಶ್ ಕುಮಾರ್, ಶರತ್ ಸೋಮಣ್ಣ, ಎನ್.ಜಿ. ಸುರೇಶ್, ಡಾ. ಬಿ.ಎಂ. ಗಣೇಶ್, ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು, ನಾನಾ ಸಂಘ-ಸAಸ್ಥೆಗಳ ಪ್ರಮುಖರು ಸೇರಿದಂತೆ ಆಸಕ್ತ ಸಾರ್ವಜನಿಕರು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.