ಮಡಿಕೇರಿ, ಜೂ. ೨೯: ಕೊರೊನಾದ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ದಾಸರ ಪದಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿಲ್ಲೆಯಾದ್ಯಂತ ೧೫೦ ಗಾಯಕರು ನೋಂದಾಯಿಸಿಕೊAಡಿದ್ದು, ತಾ. ೩೦ ರಿಂದ (ಇಂದಿನಿAದ) ಜುಲೈ ೬ರ ವರೆಗೆ ಏಳು ದಿನಗಳ ಕಾಲ ಪ್ರತಿದಿನ ಸಂಜೆ ೫ ರಿಂದ ೬.೩೦ರ ವರೆಗೆ ನಡೆಯಲಿದೆ. ಪ್ರತಿದಿನ ೨೩ ಜನ ಗಾಯಕರು ಹಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುಗಮ ಸಂಗೀತ ಗಾಯಕ ವಿದ್ಯಾ ಭೂಷಣರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೇಶವ ಕಾಮತ್ ವಹಿಸಲಿದ್ದಾರೆ.

ಪುರಂದರದಾಸ, ಕನಕದಾಸ, ವ್ಯಾಸತೀರ್ಥರು, ಶ್ರೀಪಾದರಾಯರು, ಗೋಪಾಲದಾಸ, ಶ್ರೀ ರಾಘವೇಂದ್ರ ತೀರ್ಥರು, ಹೀಗೆ ಹಲವಾರು ದಾಸರು ರಚಿಸಿದ ದಾಸರ ಪದಗಳ ಗಾಯನ ಕಾರ್ಯಕ್ರಮ ಇದಾಗಿದ್ದು, ಗೂಗಲ್ ಮೀಟ್ hಣಣಠಿs://meeಣ.googಟe.ಛಿom/ಠಿve-ivಣಜಿ-ರಿso ಲಿಂಕ್ ಒತ್ತುವ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಬಳಗದ ಪ್ರದಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.