ಸೋಮವಾರಪೇಟೆ, ಜೂ.೨೮: ಇಲ್ಲಿನ ಲಯನ್ಸ್ ಸಂಸ್ಥೆ, ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕೋವಿಡ್ ಲಸಿಕೆ ಶಿಬಿರದಲ್ಲಿ ೩೦೦ಕ್ಕೂ ಅಧಿಕ ಮಂದಿ ಲಸಿಕೆ ಪಡೆದರು.

ಲಸಿಕೆ ಅಭಿಯಾನಕ್ಕೆ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಚಾಲನೆ ನೀಡಿದರು. ಸರ್ಕಾರಿ ಆಸ್ಪತ್ರೆಯ ವೈದ್ಯ ಶಿವಪ್ರಸಾದ್ ಅವರು ಭಾಗವಹಿಸಿ ಮಾತನಾಡಿ, ಕೋವಿಡ್ ವಿರುದ್ಧ ಭಾರತೀಯರೇ ಅಭಿವೃದ್ಧಿ ಪಡಿಸಿದ ಲಸಿಕೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಎಲ್ಲರೂ ಲಸಿಕೆ ಪಡೆಯಲು ಮುಂದಾಗಬೇಕು ಎಂದರು.

ಆರAಭದಲ್ಲಿ ಲಸಿಕೆ ಪಡೆಯುವಂತೆ ಎಷ್ಟೇ ಮನವಿ ಮಾಡಿದರೂ ಜನತೆ ಮುಂದೆ ಬರಲಿಲ್ಲ. ಆರೋಗ್ಯ ಇಲಾಖೆಯವರು ಮನೆ ಮನೆಗೆ ತೆರಳಿ ಮನವೊಲಿಸಿದರೂ ನಿರ್ಲಕ್ಷö್ಯ ತೋರಿದ್ದರು. ೨ನೇ ಅಲೆಯಲ್ಲಾದ ಸಾವು ನೋವಿನಿಂದ ಇದೀಗ ಲಸಿಕೆಗೆ ಬೇಡಿಕೆ ಹೆಚ್ಚಿದೆ. ೧೮ ವರ್ಷ ಮೇಲ್ಪಟ್ಟ ಎಲ್ಲರೂ ಲಭ್ಯತೆಯ ಆಧಾರದ ಮೇಲೆ ಲಸಿಕೆ ಪಡೆಯಬೇಕು ಎಂದು ಕರೆ ನೀಡಿದರು.

ಲಯನ್ಸ್ ಅಧ್ಯಕ್ಷ ಕೆ.ಎನ್. ತೇಜಸ್ವಿ ಅವರು ಪ್ರಾಸ್ತಾವಿಕ ಮಾತನಾಡಿ, ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳನ್ನು ವಿವರಿಸಿದರಲ್ಲದೇ, ಕೊರೊನಾ ನಿಗ್ರಹಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸಿ.ಕೆ. ರೋಹಿತ್, ಖಜಾಂಚಿ ಎಸ್‌ಎನ್. ಯೋಗೇಶ್, ಪ್ರಾಂತೀಯ ಅಧ್ಯಕ್ಷ ಕೆ.ಎಂ. ಜಗದೀಶ್, ನಿಕಟಪೂರ್ವ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಎ.ಎಸ್. ಮಲ್ಲೇಶ್, ಕಾರ್ಯದರ್ಶಿ ಶ್ರೀಹರ್ಷ, ಖಜಾಂಚಿ ಡೆಂಜಿಲ್, ಒಕ್ಕಲಿಗರ ಸಂಘದ ರಾಮಚಂದ್ರ, ರಾಜಪ್ಪ ಸೇರಿದಂತೆ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ಲಸಿಕೆ ಪಡೆದ ಎಲ್ಲರಿಗೂ ಮಾಸ್ಕ್ ಹಾಗೂ ಮಧ್ಯಾಹ್ನದ ಊಟ ವಿತರಿಸಲಾಯಿತು.