*ಗೋಣಿಕೊಪ್ಪ, ಜೂ. ೨೮: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಾ ಗ್ರಾಮದ ಬಸವೇಶ್ವರ ಬಡಾವಣೆಯ ಬುಡಕಟ್ಟು ಸಮುದಾಯದವರ ಗುಡಿಸಲುಗಳಿಗೆ ಪ್ಲಾಸ್ಟಿಕ್ ಹೊದಿಕೆ ಗಳನ್ನು ಶಾಸಕರು ವಿತರಿಸಿದರು.
ಮಳೆಗಾಲದಲ್ಲಿ ಗುಡಿಸಲುಗಳಿಗೆ ನೀರು ನುಗ್ಗಿ ಸಮಸ್ಯೆಯಾಗ ಬಾರದೆಂದು ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಿದ ಶಾಸಕರು ಮುಂದಿನ ಕೆಲ ದಿನಗಳಲ್ಲಿಯೇ ಪ್ರಾರಂಭವಾಗುವ ಮನೆ ನಿರ್ಮಾಣ ಕಾಮಗಾರಿ ಪೂರ್ಣ ಹಂತಗೊಳ್ಳುವವರೆಗೆ ತಾತ್ಕಾಲಿಕ ಶೆಡ್‌ಗಳನ್ನು ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡುತ್ತಿರುವುದಾಗಿ ಈ ಸಂದರ್ಭ ತಿಳಿಸಿದರು.
ತಾಲೂಕು ತಹಶೀಲ್ದಾರ್ ಯೋಗಾನಂದ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಹಾತೂರು ಗ್ರಾ.ಪಂ. ಅಧ್ಯಕ್ಷ ಕುಪ್ಪಂಡ ಗಿರಿಪೂವಣ್ಣ, ಉಪಾಧ್ಯಕ್ಷ ಸುಮಾ, ಗ್ರಾ.ಪಂ. ಸದಸ್ಯರುಗಳಾದ ಗುಮ್ಮಟ್ಟಿರ ದರ್ಶನ್, ಪಿ.ಜಿ. ಸುಮಿತ್ರ, ಕೆ.ಎಂ. ಶ್ವೇತಾ, ಮುತ್ತುರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧೀಕ್ಷಕ ನವೀನ್, ಹಾತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಝ್ಮ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಹಾಡಿಯ ಮುಖಂಡ ಗಪುö್ಪ ಸೇರಿದಂತೆ ಹಾಡಿ ನಿವಾಸಿಗಳು ಹಾಜರಿದ್ದರು.