ಸರಿಪಡಿಸುವಾಗ ವ್ಯಕ್ತಿಗೆ ಗಂಭೀರ ಗಾಯ

ಮಡಿಕೇರಿ, ಜೂ. ೨೮: ಇತ್ತೀಚೆಗೆ ಸುರಿದ ಭಾರೀ ಮಳೆ - ಗಾಳಿಯ ಸಂದರ್ಭದಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಸೆಸ್ಕ್ ಇಲಾಖೆಗೆ ಸಹಕರಿಸಲು ಮುಂದಾಗಿದ್ದ ವ್ಯಕ್ತಿಯೋರ್ವರ ಮೇಲೆ ಮರ ತುಂಡರಿಸಿ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಡವಾಗಿ ವರದಿಯಾಗಿದೆ.

ವಣಚಲು ಸನಿಹ ವಿದ್ಯುತ್ ತಂತಿ ಹಾದು ಹೋಗಿದ್ದ ಮಾರ್ಗದಲ್ಲಿ ಮರದ ರೆಂಬೆಗಳನ್ನು ಕಡಿಯಲು ಅಲ್ಲಿನ ನಿವಾಸಿ ಅಯ್ಯರಣಿಯಂಡ ಅಚ್ಚಯ್ಯ (ಪೊನ್ನ) ಸೇರಿದಂತೆ ಗ್ರಾಮಸ್ಥರು ಸೆಸ್ಕ್ ಸಿಬ್ಬಂದಿ ಜತೆ ಕೈಗೂಡಿಸಿದ್ದರು. ಮರದ ಮೇಲೆ ಹತ್ತಿ ರೆಂಬೆ ಕಡಿಯುತ್ತಿದ್ದ ಸಂದರ್ಭ ಅಚ್ಚಯ್ಯ (ಪೊನ್ನ) ಅವರ ಮೇಲೆ ತುಂಡರಿಸಿದ ಮರ ಅಪ್ಪಳಿಸಿ ಅವರು ಅದರ ನಡುವೆ ಸಿಲುಕಿ ಹಾಕಿಕೊಂಡಿದ್ದರೆನ್ನಲಾಗಿದೆ. ಘಟನೆಯಿಂದ ಅವರ ಕತ್ತಿನ ಭಾಗ ಹಾಗೂ ತೋಳುಗಳಿಗೆ ಭಾರೀ ಪೆಟ್ಟಾಗಿದ್ದು ಪ್ರಜ್ಞಾಹೀನರಾಗಿದ್ದರು. ಬಳಿಕ ಇವರನ್ನು ಮಡಿಕೇರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆರವಿಗೆ ಮನವಿ

ಪ್ರಸ್ತುತ ಅಚ್ಚಯ್ಯ ಅವರು ಗಂಭೀರ ಸ್ವರೂಪದಲ್ಲಿಯೇ ಇದ್ದು ಚಿಕಿತ್ಸೆಗೆ ಲಕ್ಷಾಂತರ ಹಣ ವ್ಯಯವಾಗಲಿದ್ದು, ಈಗಾಗಲೇ ರೂ. ೨ ಲಕ್ಷ ವೆಚ್ಚವಾಗಿದ್ದು, ಪ್ರತಿದಿನದ ಚಿಕಿತ್ಸೆಗೆ ಸಾವಿರಾರು ರೂಪಾಯಿ ಅಗತ್ಯ ಎದುರಾಗಿದೆ.

ಈ ಹಿನ್ನೆಲೆ ಇವರ ಚಿಕಿತ್ಸೆಗೆ ಜಿಲ್ಲಾಡಳಿತವು ಸೇರಿದಂತೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಸಂಬAಧಿಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಶಾಸಕ ಅಪ್ಪಚ್ಚು ರಂಜನ್ ಅವರ ಗಮನಕ್ಕೂ ತರಲಾಗಿದೆ. ನೆರವು ನೀಡುವವರು ಖಾತೆ ಸಂಖ್ಯೆ - ೩೦೮೦೮೮೩೨೦೧೯ IಈSಅ ಕೋಡ್ SಃIಓ ೦೦೦೦೮೭೬ ಗೆ ಆರ್ಥಿಕ ಸಹಾಯ ನೀಡಬಹುದಾಗಿದೆ.