ಅನಿಲ್ ಎಚ್.ಟಿ.
ಮಡಿಕೇರಿ, ಜೂ. ೨೮: ಕೋವಿಡ್ ಸೋಂಕಿತರಿಗಾಗಿ ಇರುವ ಕುಶಾಲನಗರ ಬಳಿಯ ಬಸವನಹಳ್ಳಿ ಮೊರಾರ್ಜಿ ಬಾಲಕರ ವಸತಿ ನಿಲಯ ಈಗ ಕೇಳುವವರಿಲ್ಲದ ಕೊಂಪೆಯAತಾಗಿದೆ. ದೂರು ನೀಡಿದರೆ ಸೋಂಕಿತರ ವಿರುದ್ಧವೇ ಆರೋಗ್ಯ ಸಿಬ್ಬಂದಿಗಳು ಹರಿಹಾಯುತ್ತಿದ್ದಾರೆ.
ಎಲ್ಲವೂ ಸರಿಯಾಗಿದೆ ಎಂದು ಸಚಿವರು, ಶಾಸಕರ ಮುಂದೆ ಹೇಳಿಕೆ ನೀಡುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ಕೇಂದ್ರಗಳಿಗೆ ತೆರಳಿ ಪರಿಶೀಲನೆಯನ್ನೇ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಮಾತನ್ನೇ ನಂಬಿಕೊAಡ ಶಾಸಕರು, ಮಂತ್ರಿಗಳು ಸೋಂಕಿತ ರೋಗಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬAತಾಗಿದೆ.
ಬಸವನಹಳ್ಳಿ ಕೋವಿಡ್ ಕೇಂದ್ರದಲ್ಲಿ ೭೦ ಮಂದಿ ಸೋಂಕಿತರಿದ್ದಾರೆ. ಇವರು ಇರುವ ಕೊಠಡಿಯ ಸ್ಥಿತಿ ಶೋಚನೀಯ ವಾಗಿದೆ. ಕೋಣೆಯನ್ನು ಸ್ಯಾನಿಟೈಸ್ ಮಾಡದೇ ವಾರಗಳೇ ಕಳೆದಿದೆ. ಕೇಂದ್ರದ ಹೊರಗಡೆ ಮಾತ್ರ ಕಾಟಾಚಾರಕ್ಕೆ ಎಂಬAತೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸೋಂಕಿತರು ಇರುವ ವಾರ್ಡ್ ಶುಚಿಯಾಗದೇ ದಿನಗಳೇ ಆಗಿದೆ. ಹಾಸಿಗೆಗಳು ಶುಚಿಗೊಳ್ಳದೇ ಗಬ್ಬೆದ್ದು ಹೋಗಿದ್ದರೆ ಕೆಲವೊಂದು ಹಾಸಿಗೆಗಳು ಹಾಳಾಗಿ ದುರ್ನಾತ ಬೀರುತ್ತಿವೆ. ಇಂಥ ಹಾಸಿಗೆಯಲ್ಲಿಯೇ ಸೋಂಕಿತರು ಮಲಗಬೇಕಾದ ಸ್ಥಿತಿಯಿದೆ.
ಸ್ವಚ್ಛತೆ ಮಾಯ..!
ಶೌಚಾಲಯವನ್ನೂ ದಿನನಿತ್ಯ ಶುಚಿಗೊಳಿಸಲಾಗುತ್ತಿಲ್ಲ. ಊಟ ಸಮಯಕ್ಕೆ ಸರಿಯಾಗಿ ಸಿಗುತ್ತಿದ್ದರೂ ರುಚಿ ಕೇಳೋದೇ ಬೇಡ. ಕೊಟ್ಟದ್ದು ತಿನ್ನಬೇಕಷ್ಟೇ ಎಂಬAತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸೋಂಕಿತರು ಇರುವ ವಾರ್ಡ್ನೊಳಗೆ ನಾಯಿಗಳ ಕಾಟ. ನಾಯಿಗಳ ಸಂಚಾರ ವಾರ್ಡ್ನಲ್ಲಿ ಸರ್ವೇ ಸಾಮಾನ್ಯ.
ಕೆಲವು ಸೋಂಕಿತರು ಎಲೆ ಅಡಕೆ ತಿಂದು ಅಲ್ಲಿಯೇ ಉಗುಳಿ ಇಡೀ ವಾರ್ಡ್ನ ಶುಚಿತ್ವವನ್ನೇ ಕೆಡಿಸಿಬಿಟ್ಟಿದ್ದಾರೆ. ಕೇಂದ್ರದೊಳಗೆ ಎಲೆ ಅಡಕೆ ಉಗಿಯಬೇಡಿ ಎಂದು ಕಟ್ಟು ನಿಟ್ಟಾಗಿ ಹೇಳುವವರು ಇಲ್ಲದಂಥ ಸ್ಥಿತಿ ಕೋವಿಡ್ ಕೇಂದ್ರದಲ್ಲಿದೆ. ಕೋವಿಡ್ ವ್ಯಾಪಿಸದಂತೆ ಕಂಡಕAಡಲ್ಲಿ ಉಗಿಯಬೇಡಿ ಎಂಬ ಸರ್ಕಾರದ ಎಚ್ಚರಿಕೆ ಬಸವನಹಳ್ಳಿ ಕೋವಿಡ್ ಕೇಂದ್ರದಲ್ಲಿ ಮೂಲೆಪಾಲಾಗಿದೆ.
ರೋಗಿಗಳ ಮೇಲೆ ರೇಗುತ್ತಾರೆ...!
ಸೋಂಕಿತ ರೋಗಿ ಗುಣಮುಖರಾಗಿ ಕೇಂದ್ರದಿAದ ತೆರಳಿದರೆ ಆತ, ಅಥವಾ ಆಕೆಯಿದ್ದ ಹಾಸಿಗೆಯನ್ನು , ಕೋಣೆಯನ್ನು ಶುಚಿಗೊಳಿಸಲಾಗುತ್ತಲೇ ಇಲ್ಲ. ಹೊಸ ರೋಗಿ ಬಂದರೆ ಶುಚಿಯಾಗದ ಬೆಡ್ ನೀಡಲಾಗುತ್ತಿದೆ ಎಂದು ಕೇಂದ್ರದಲ್ಲಿದ್ದವರು ತಿಳಿಸಿದರು. ಈ ಬಗ್ಗೆ ಕೇಳಿದರೆ ‘ನೀವೇನು ಗೆಸ್ಟ್ಹೌಸ್‌ಗೆ ಬಂದಿದ್ದೀರಾ.. ನಿಮ್ಮ ರೂಮ್ ನೀವೇ ಶುಚಿಗೊಳಿಸಬೇಕು. ಎಲ್ಲವನ್ನೂ ನಾವೇ ಮಾಡಲಾಗುವುದಿಲ್ಲ’ ಎಂದು ರೇಗುತ್ತಾರೆ. ಕೋವಿಡ್ ಬಂದು ಮೊದಲೇ ಭಯದಿಂದ ಇರುತ್ತೇವೆ. ಅದರ ಮಧ್ಯೆ ಕೋಣೆಯನ್ನು ಶುಚಿಗೊಳಿಸಬೇಕು. ಗುಡಿಸಿ ಸಾರಿಸಬೇಕು ಎಂದರೆ ಹೇಗೆ, ಉಸಿರಾಟದ ಸಮಸ್ಯೆ ಇದ್ದವರು ಧೂಳು ತುಂಬಿದ ಕೋಣೆ ಶುಚಿಗೊಳಿಸಬೇಕು ಎಂದರೆ ಹೇಗೆ, ನಮಗೆ ಜ್ವರ ಹೆಚ್ಚಾದರೂ ಅಗತ್ಯ ಔಷಧಿ ನೀಡುತ್ತಿಲ್ಲ. ನಮ್ಮ ಗೋಳು ಯಾವುದೇ ಸೋಂಕಿತರಿಗೂ ಬೇಡ ಎಂದು ನೋವಿನಿಂದ ಇಲ್ಲಿದ್ದವರು ಹೇಳುತ್ತಾರೆ.
ವೈದ್ಯಕೀಯ ಸಿಬ್ಬಂದಿ ಕೇಂದ್ರದ ಹೊರಗಡೆ ಇರುವ ಮರದ ಕೆಳಗಡೆ ಬಂದು ಬೆಳಗ್ಗೆ ನಿಲ್ಲುತ್ತಾರೆ. ನಾವು ಖೈದಿಗಳ ಹಾಗೆ ಅವರಲ್ಲಿಗೆ ತೆರಳಿ ಆರೋಗ್ಯ ಮಾಹಿತಿ ನೀಡಬೇಕು. ಕೇಂದ್ರದ ಒಳಗೆ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿ ಬರುವುದು ತೀರಾ ಅಪರೂಪ ಎನ್ನುತ್ತಾರೆ ಕೆಲವು ರೋಗಿಗಳು.
ವೈದ್ಯರು ಮನೆಯಲ್ಲಿ...
ಈ ಕೇಂದ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿತರಾಗಿರುವ ಅಮ್ಮಂದಿರ ಜತೆ ಪುಟ್ಟ ಮಕ್ಕಳು. ಇದ್ದರಂತೆ. ಈ ಮಕ್ಕಳಿಗೆ ಸರಿಯಾಗಿ ತಿನಿಸು ಸಿಗದೇ ಹೊಟ್ಟೆ ನೋವಿನಿಂದ ಪರದಾಡಿದರೂ ದಾದಿಯರು ಊಟದ ವಿಚಾರದಲ್ಲಿ ನಾವೇನೂ ಮಾಡಲಾಗುವುದಿಲ್ಲ ಎಂದು ಕೈಚೆಲ್ಲಿದರಂತೆ. ಕೇಂದ್ರದ ಉಸ್ತುವಾರಿ ವೈದ್ಯೆ ಸ್ವತಃ ಸೋಂಕಿಗೊಳಗಾಗಿ ಗೃಹಸಂಪರ್ಕ ತಡೆಯಲ್ಲಿದ್ದಾರೆ. ಸೋಂಕಿತರು ಮಾತ್ರ ಇಂಥ ಕೆಟ್ಟ ನಿರ್ವಹಣೆಯ ಕೇಂದ್ರದಲ್ಲಿರಬೇಕು. ಸೋಂಕಿತ ವೈದ್ಯರು ಅವರ ಮನೆಯಲ್ಲಿರಬಹುದು ಎಂಬುದು ಸರಿಯೇ , ವೈದ್ಯರನ್ನೂ ಇಂಥ ಕೇಂದ್ರಕ್ಕೆ ದಾಖಲಿಸಿ. ಅವರಿಗೆ ತಾವು ಹೇಗೆ ಕೇಂದ್ರ ನಿರ್ವಹಣೆ ಮಾಡುತ್ತಿದ್ದೇವೆ. ಕೇಂದ್ರದ ವಾಸ್ತವ ಸ್ಥಿತಿ ಏನು ಎಂಬದು ತಿಳಿಯಬೇಕು. ನಾವು ಅನುಭವಿಸುತ್ತಿರುವ ನೋವು ಅವರಿಗೆ ಅರ್ಥವಾಗಬೇಕು ಎಂದು ಇಲ್ಲಿದ್ದವರು ಬೇಸರದಿಂದಲೇ ಹೇಳುತ್ತಿದ್ದಾರೆ.
ಬಸವನಹಳ್ಳಿ ಕೋವಿಡ್ ಕೇಂದ್ರದ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷö್ಯ ಸ್ಪಷ್ಟವಾಗಿದೆ. ತಾವು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಳ್ಳುವ ಬದಲಿಗೆ ಅಧಿಕಾರಿಗಳು ತಮ್ಮ ಕಚೇರಿಯಿಂದ ಹೊರಬಂದು ಆಗಿಂದಾಗ್ಗೆ ಇಂಥ ಕೇಂದ್ರಗಳಿಗೆ ದಿಡೀರ್ ತಪಾಸಣೆ ತೆರಳಿದರೆ ವಾಸ್ತವ ಸ್ಥಿತಿ ತಿಳಿಯುತ್ತದೆ.