ಸೋಮವಾರಪೇಟೆ, ಜೂ. ೨೮: ಕಾಡುಹಂದಿ ಧಾಳಿಗೆ ಕೃಷಿಕನೋರ್ವ ಬಲಿಯಾಗಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.

ಕಿರಗಂದೂರಿನ ನಿವಾಸಿ ಎಸ್.ಎಲ್. ಪೂವಯ್ಯ ಎಂಬವರ ಪುತ್ರ ಎಸ್.ಪಿ. ಕುಶಾಲಪ್ಪ (ವಿನು-೪೩) ಎಂಬವರೇ ವನ್ಯ ಪ್ರಾಣಿಯ ಧಾಳಿಯಿಂದ ಮೃತಪಟ್ಟವರು. ಇಂದು ಬೆಳಿಗ್ಗೆ ತೋಟದಲ್ಲಿ ಕಾಫಿ ಗಿಡಗಳ ಚಿಗುರು ತೆಗೆಯುವ ಕೆಲಸ ಮಾಡುತ್ತಿರುವಾಗ ಕಾಡುಹಂದಿ ಧಾಳಿ ಮಾಡಿದೆ. ಕುಶಾಲಪ್ಪ ಅವರ ಬಲ ತೊಡೆಯ ಭಾಗದಲ್ಲಿ ಸೀಳಿದ ಗಾಯವಾಗಿದ್ದು, ಹೊಟ್ಟೆ ಕೆಳಗಿನ ಸೂಕ್ಷö್ಮ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಯವರು ಮಧ್ಯಾಹ್ನ ಕರೆ ಮಾಡಿದ ಸಂದರ್ಭ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತೋಟದಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮೃತದೇಹ ಪತ್ತೆಯಾಗಿದೆ. ಗ್ರಾಮಸ್ಥರು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಕಾಡುಹಂದಿಯ ಹೆಜ್ಜೆ ಗುರುತುಗಳು ಗೋಚರಿಸಿದ್ದು, ಕುಟುಂಬದವರು ಸೋಮವಾರಪೇಟೆ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಡಿ.ಆರ್.ಎಫ್. ಒ.ಜಗದೀಶ್ ಭೇಟಿ ನೀಡಿದ್ದಾರೆ. ಶವಪರೀಕ್ಷೆಯ ನಂತರ ಘಟನೆಗೆ ನಿಖರ ಕಾರಣ ತಿಳಿಯಲಿದೆ.

(ಮೊದಲ ಪುಟದಿಂದ) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಈವರೆಗೆ ಕಾಡು ಹಂದಿಯನ್ನು ಮನುಷ್ಯರು ಭೇಟೆಯಾಡಿದ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಕಾಡುಹಂದಿಯೇ ಮನುಷ್ಯರನ್ನು ಭೇಟೆಯಾಡಿರುವ ಘಟನೆ ಜರುಗಿರುವುದು ಸಾರ್ವಜನಿಕರಲ್ಲಿ ದಿಗ್ಭçಮೆ ಉಂಟುಮಾಡಿದೆ.