ಕಡAಗ, ಜೂ. ೨೮: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಪಟ್ಟು ಕಡಂಗ ಗ್ರಾಮದಲ್ಲಿ ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬವೊAದು ಕಳೆದ ಒಂದು ವರ್ಷಗಳಿಂದ ಬೀಳುವ ಸ್ಥಿತಿಯಲ್ಲಿದ್ದು, ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕಂಬವನ್ನು ಸರಿಪಡಿಸಿ ಅನಾಹುತವನ್ನು ತಪ್ಪಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅದೇ ರೀತಿ ಪೊದ್ದಮಾನಿ ಕೋಡಿರ ಗದ್ದೆಯಲ್ಲಿರುವ ವಿದ್ಯುತ್ ತಂತಿಗಳು ಜೋತಾಡುತ್ತಿದ್ದು, ಗದ್ದೆಯಲ್ಲಿ ಕೃಷಿ ಕಾರ್ಯ ಚಟುವಟಿಕೆಗಳಿಗೆ ತೊಡಕಾಗುತ್ತಿದೆ ಎಂದು ಕೋಡಿರ ಆಶೀಶ್ ತಿಳಿಸಿದ್ದಾರೆ.