ಗೋಣಿಕೊಪ್ಪ ವರದಿ, ಜೂ. ೨೭: ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ವಿಶ್ವಯೋಗ ಸಂಸ್ಥೆ ವತಿಯಿಂದ ಯೋಗ ದಿನಾಚರಣೆ ಅಂಗವಾಗಿ ಐದು ಕಡೆಗಳಲ್ಲಿ ಯೋಗಾಭ್ಯಾಸ ನಡೆಸಿದರು.
ಆನ್ಲೈನ್ ಮೂಲಕ ಕುಟ್ಟ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮನೆಯಲ್ಲಿಯೇ ಯೋಗಾಸನ ಕಲಿಸಲಾಯಿತು. ಸೇವಾದಳದ ಶಿಕ್ಷಕರು, ಅಮ್ಮತ್ತಿ ಕ್ಲಬ್ ಸದಸ್ಯರು, ಹಳ್ಳಿಗಟ್ಟು ದೇವನಾಗಹಾಡಿ, ಮತ್ತೂರು ಹಾಡಿ ನಿವಾಸಿಗಳು ಕೂಡ ಯೋಗಾನುಭವ ಪಡೆದರು.
ಮನಸ್ಸಿನ ವ್ಯಾಯಾಮಕ್ಕೆ ಪ್ರಶಾಂತ ಕ್ರಿಯೆ, ದೇಹದೊಳಗಿನ ವ್ಯಾಯಾಮಕ್ಕೆ ಸಕ್ರೀಯ ಕ್ರಿಯೆ, ದೇಹದೊಳಗಿನ ಹಲವು ಅಂಗಗಳಲ್ಲಿನ ಮರ್ದನಕ್ಕೆ ಬಂಧಯೋಗ, ಮುದ್ರೆ ಯೋಗ ಹೇಳಿಕೊಡಲಾಯಿತು. ಯೋಗ ಶಿಕ್ಷಕಿ ಪಿ.ಹೆಚ್. ಅಲೀಮಾ ಯೋಗ ನಡೆಸಿಕೊಟ್ಟರು.