ಕುಶಾಲನಗರ, ಜೂ. ೨೭: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಕಳೆದ ಕೆಲವು ವರ್ಷಗಳಿಂದ ಪಕ್ಷಿಗಳ ಕಲರವದೊಂದಿಗೆ ಉತ್ತಮ ಪರಿಸರದ ವಾತಾವರಣ ಕಾಣಬಹುದು. ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನೆಟ್ಟು ಬೆಳಸಿರುವ ಮರಗಳು ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದು ನೋಡುಗರ ಮನಸಿಗೆ ಮುದನೀಡುವಂತಿವೆ. ಇಲ್ಲಿ ಪ್ರತೀ ವರ್ಷ ತಾತ್ಕಾಲಿಕವಾಗಿ ವಲಸೆ ಬಂದು ತಮ್ಮ ಸಂತಾನಾಭಿವೃದ್ದಿ ಮಾಡಲು ವಿಶೇಷ ತಳಿಯ ಕೊಕ್ಕರೆಗಳು ಬಂದು ಹಿಂತಿರುಗಿ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಈ ನಡುವೆ ಇಲ್ಲಿಗೆ ಬಂದು ನೆಲಸಿರುವ ಕಾಗೆಗಳ ತಳಿಯ ನೂರಕ್ಕೂ ಅಧಿಕ ಪಕ್ಷಿಗಳ ತಂಡವೊAದು ಇಡೀ ಮರಗಳಲ್ಲಿ ಗೂಡು ಕಟ್ಟಿಕೊಂಡು ತಮ್ಮ ನೆಲೆ ಸೃಷ್ಟಿಸಿಕೊಂಡಿದ್ದು, ಇದೀಗ ಇವೆರಡು ಪಕ್ಷಿಗಳ ತಳಿಗಳ ನಡುವೆ ತಮ್ಮ ನೆಲೆಗಾಗಿ ಶೀತಲ ಸಮರ ಪ್ರಾರಂಭಗೊAಡAತೆ ಗೋಚರಿಸುತ್ತಿದೆ.
ಪಕ್ಷಿಗಳು ಸಾಮಾನ್ಯವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ ಮೂಲಕ ತಮ್ಮ ಸಂಕುಲವನ್ನು ಬೆಳೆಸುತ್ತವೆ. ಹೀಗೆ ಪ್ರತೀ ವರ್ಷ ಮರಗಳಲ್ಲಿ ಹಕ್ಕಿಗಳು ನೆಲೆಗಾಗಿ ಬಂದು ಗೂಡು ನಿರ್ಮಿಸುವುದರೊಂದಿಗೆ ದಿನನಿತ್ಯ ಕಲರವ ಸೃಷ್ಟಿಸುತ್ತ ಪಕ್ಷಿಪ್ರಿಯರಿಗೆ ಒಂದು ಉತ್ತಮ ಸನ್ನಿವೇಶ ಉಂಟಾಗುವAತೆ ಮಾಡುತ್ತಿದ್ದವು. ಕಳೆದ ಕೆಲವು ವರ್ಷಗಳಿಂದ ದೂರದ ಪ್ರದೇಶಗಳಿಂದ ಇಲ್ಲಿಗೆ ತಮ್ಮ ಸಂತಾನಾಭಿವೃದ್ದಿಗಾಗಿ ವಲಸೆ ಬರುತ್ತಿರುವ ವಿಶೇಷ ತಳಿಯ ಕೊಕ್ಕರೆಗಳು ಮಾತ್ರ ಮರಿಗಳೊಂದಿಗೆ ನಿಗದಿತ ಅವಧಿಯಲ್ಲಿ ಮತ್ತೆ ತಮ್ಮ ಮೂಲ ನೆಲೆಗೆ ಹಿಂತಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಆದರೆ ಇತ್ತಿಚಿನ ಬೆಳವಣಿಗೆಯಲ್ಲಿ ಈ ಪರಿಸರ ತಾಣದ ಮರಗಳಲ್ಲಿ ನೀರು ಕಾಗೆ ಜಾತಿಯ ಪಕ್ಷಿಗಳು ಶಾಶ್ವತವಾಗಿ ನೆಲೆಸಿದ್ದು ಇದರಿಂದ ವಲಸೆ ಬರುವ ಕೊಕ್ಕರೆ ಪಕ್ಷಿಗಳ ಆಶ್ರಯಕ್ಕೆ ಅಡ್ಡಿಯುಂಟಾಗಿರುವ ದೃಶ್ಯ ಗೋಚರಿಸಿವೆ. ಪಕ್ಷಿಗಳು ಕೂಡ ಮಾನವನಂತೆ ತಮ್ಮ ನೆಲೆಗಾಗಿ ಸೆಣಸಾಟ ನಡೆಸುತ್ತಿರುವಂತೆ ಭಾಸವಾಗುತ್ತದೆ, ಪಟ್ಟಣದ ಹೃದಯ ಭಾಗದಲ್ಲಿ ಉತ್ತಮ ಪರಿಸರ ನಿರ್ಮಾಣವಾಗಿದ್ದು ವಾತಾವರಣ ತಂಪಿನೊAದಿಗೆ ಸೊಂಪಾಗಿರುವAತೆ ಮಾಡಿದೆ. ಈ ಬೆಳವಣಿಗೆಯಿಂದ ತಮ್ಮ ತಾತ್ಕಾಲಿಕ ನೆಲೆ ಕಳೆದುಕೊಂಡ ಕೊಕ್ಕರೆ ಪಕ್ಷಿಗಳು ತಮ್ಮ ಜಾಗವನ್ನು ಒತ್ತುವರಿ ಮಾಡಿ ಕೊಂಡಿರುವ ನೀರು ಕಾಗೆಗಳ ಜೊತೆ ಶೀತಲ ಸಮರದಲ್ಲಿ ತೊಡಗಿರುವ ದೃಶ್ಯ ನಿತ್ಯ ಕಾಣಬಹುದು. ಕಪ್ಪು ಮತ್ತು ಬಿಳಿ ಪಕ್ಷಿಗಳ ದಿನನಿತ್ಯದ ಸಮರ ಅವುಗಳ ಚಿಲಿ-ಪಿಲಿ ನಾದದೊಂದಿಗೆ ಇಡೀ ಪ್ರದೇಶವನ್ನು ಆವರಿಸುವುದರೊಂದಿಗೆ ಪಟ್ಟಣದ ಹೃದಯಭಾಗದಲ್ಲಿ ಒಂದು ಪುಟ್ಟ ಪಕ್ಷಿಧಾಮವೇ ಸೃಷ್ಟಿಯಾದಂತೆ ಭಾಸವಾಗುತ್ತಿದೆ.
- ಎಂ.ಎನ್. ಚಂದ್ರಮೋಹನ್