ಪೊನ್ನಂಪೇಟೆ, ಜೂ. ೨೫: ಜೇಸಿಐ ಭಾರತದ ವಲಯ ೧೪ರಲ್ಲಿರುವ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಮತ್ತು ಜೆ.ಸಿ.ಐ. ಮೈಸೂರು ಕಿಂಗ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ತಾ. ೨೭ ರಂದು ವ್ಯವಹಾರ ಅಭಿವೃದ್ಧಿ (ಃusiಟಿess ಆeveಟoಠಿmeಟಿಣ) ಕುರಿತ ಆನ್ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ತಾ. ೨೭ ರಂದು ಮಧ್ಯಾಹ್ನ ೨ ಗಂಟೆಗೆ 'ಜೂಮ್' ವೇದಿಕೆಯ ಮೂಲಕ ನಡೆಯುವ ಈ ಕಾರ್ಯಕ್ರಮವನ್ನು ಜೇಸಿಸ್ ವಲಯಾಧ್ಯಕ್ಷ ಸೆನೆಟರ್ ಭರತ್ ಎನ್. ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ. 'ಎ' ಪ್ರಾಂತ್ಯದ ವಲಯ ಉಪಾಧ್ಯಕ್ಷ ಬಾಬು ಎಂ. ಗೌಡ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ಈ ಕಾರ್ಯಾಗಾರದಲ್ಲಿ ವಲಯದ ವ್ಯವಹಾರ ವಿಭಾಗದ ನಿರ್ದೇಶಕ ಪ್ರಜ್ವಲ್ ಜೈನ್ ಅವರು ಸಂಪನ್ಮೂಲ ಅತಿಥಿಗಳಾಗಿ ಪಾಲ್ಗೊಂಡು ತರಬೇತಿ ನೀಡಲಿದ್ದಾರೆ.
ವಿವಿಧ ಘಟಕಗಳ ಸದಸ್ಯರು ಸೇರಿದಂತೆ ಸಾರ್ವಜನಿಕರಿಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿರುತ್ತದೆ. ಆದ್ದರಿಂದ, ಆನ್ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತರು Zoom ಂಠಿಠಿ ಅನ್ನು ಡೌನ್ಲೋಡ್ ಮಾಡಿಕೊಂಡು ಐ.ಡಿ. ಸಂಖ್ಯೆಯಾದ. ೮೨೬೮೫೪೭೮೦೫೯ ಮತ್ತು '೧೨೩' ಎಂಬ ಪಾಸ್ ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಬಹುದಾಗಿದೆ ಎಂದು ಉಭಯ ಘಟಕಗಳ ಅಧ್ಯಕ್ಷರುಗಳಾದ ವನಿತ್ ಕುಮಾರ್ ಮತ್ತು ಟಿ.ಸಿ. ಮಂಜುನಾಥ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ