ಕುಶಾಲನಗರ, ಜೂ.೨೫: ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಶೇ.೯೧ ರಷ್ಟು ಲಸಿಕೆ ನೀಡುವ ಗುರಿ ಸಾಧಿಸಲಾಗಿದೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದುವರೆಗೆ ೪೫-೬೦ ವರ್ಷದ ನಾಗರಿಕರಿಗೆ ಪ್ರತಿಯೊಬ್ಬರಿಗೂ ಲಸಿಕೆ ನೀಡಿಕೆ ಪೂರ್ಣಗೊಂಡಿದೆ.
೪೫ ರಿಂದ ಮೇಲ್ಪಟ್ಟ ವಯೋಮಾನದ ಅಂದಾಜು ೪೨೦೦ ಮಂದಿಗೆ ಲಸಿಕೆ ನೀಡುವಲ್ಲಿ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಗುರಿ ಸಾಧಿಸಿದೆ.
೧೮-೪೪ ವಯೋಮಾನದ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯ ಪ್ರಾರಂಭಗೊAಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ೧೮ ರಿಂದ ೪೪ ರ ವಯೋಮಾನದ ಒಟ್ಟು ೧೨ ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀವಳ್ಳಿ ತಿಳಿಸಿದ್ದಾರೆ. ಬೈಲುಕೊಪ್ಪ ಟಿಬೇಟಿಯನ್ ಕೇಂದ್ರದಲ್ಲಿ ಇದುವರೆಗೆ ೬೮೦೦ ಮಂದಿ ಟಿಬೇಟಿಯನ್ ನಿರಾಶ್ರಿತರು ಲಸಿಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ೧೮ರ ವಯೋಮಾನದ ಮೇಲ್ಪಟ್ಟ ಶೇ.೧೦೦ ರಷ್ಟು ಟಿಬೇಟಿಯನ್ ಲಾಮಗಳಿಗೆ ಲಸಿಕೆ ನೀಡುವಲ್ಲಿ ಮೈಸೂರು ಆರೋಗ್ಯ ಇಲಾಖೆ ಗುರಿ ಸಾಧಿಸಿದೆ. ಕೊಪ್ಪ ಆರೋಗ್ಯ ಕೇಂದ್ರದ ಡಾ.ಶ್ರಿವಳ್ಳಿ, ಆರೋಗ್ಯಾಧಿಕಾರಿ ಮುಜೀಬ್ ಮತ್ತು ಸಿಬ್ಬಂದಿಗಳು, ಆಶಾಕಾರ್ಯ ಕರ್ತೆಯರು ಸಾಧನೆಗೆ ಕಾರಣರಾಗಿದ್ದಾರೆ.