ಮಡಿಕೇರಿ, ಜೂ. ೨೫: ಮರಂದೋಡ ಗ್ರಾಮದ ಕೆರೆತಟ್ಟು ಹಾಗೂ ಬಿದ್ದಂಡ ತಟ್ಟು ಪಂಚಾಯಿತಿ ಕಾಲೋನಿಯ ಗ್ರಾಮಸ್ಥರಿಗೆ ಕೋವಿಡ್ ಪರೀಕ್ಷೆಯನ್ನು ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಹಾಗೂ ಲೀಲಾವತಿ ಕೆ. ಆರ್. ಅವರ ಮುಂದಾಳತ್ವದಲ್ಲಿ ಬಾರಿಕೆ ನಂದ ಅವರ ಹೋಂಸ್ಟೇಯಲ್ಲಿ ನಡೆಸಲಾಯಿತು.
ಗ್ರಾಮದ ಆಶಾಕಾರ್ಯಕರ್ತೆ ಕುಸುಮ ಹಾಗೂ ಅಂಗನವಾಡಿ ಶಿಕ್ಷಕಿ ಚಂದ್ರಕಲಾ, ಚೆಯ್ಯಂಡಾಣೆಯ ಶುಶ್ರೂಷಕಿ ರೋಹಿಣಿ ಹಾಗೂ ಮಡಿಕೇರಿ ಜಿಲ್ಲಾಸ್ಪತ್ರೆಯ ಶುಶ್ರೂಷಕಿಯರು ಆಗಮಿಸಿದ್ದರು. ಇದರಲ್ಲಿ ೭೩ ಜನರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡರು.