ವರದಿ : ಚಂದ್ರಮೋಹನ್

ಕುಶಾಲನಗರ,ಜೂ.೨೪: ಕೋವಿಡ್-೧೯ ರ ೨ನೇ ಅಲೆಯ ನಿರ್ವಹಣೆಯಲ್ಲಿ ಸೋಮವಾರ ಪೇಟೆ ತಾಲೂಕು ಆರೋಗ್ಯ ಇಲಾಖೆಯ ತಂಡ ಇದುವರೆಗೆ ಯಶಸ್ವಿಯಾಗಿದೆ. ಒಂದನೇ ಮತ್ತು ೨ನೇ ಅಲೆಯ ನಡುವೆ ಇದುವರೆಗೆ ತಾಲೂಕಿನಲ್ಲಿ ೧ ಲಕ್ಷದ ೨೦ ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದರೆ, ೭೬ ಸಾವಿರಕ್ಕೂ ಅಧಿಕ ಮಂದಿಗೆ ತಾಲೂಕಿನ ವ್ಯಾಪ್ತಿಯಲ್ಲಿ ೧ನೇ ಹಂತದ ಲಸಿಕೆ ನೀಡುವ ಗುರಿ ತಲುಪಲಾಗಿದೆ. ಈ ಬಗ್ಗೆ ‘ಶಕ್ತಿ’ಗೆ ಸೋಮವಾರಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರನ್ನು ಸಂಪರ್ಕಿಸಿದಾಗ ಸಮಗ್ರ ಮಾಹಿತಿ ನೀಡಿದ್ದಾರೆ.

ಕೊರೊನಾ ೨ ಅಲೆಗಳ ನಡುವೆ ೩ನೇ ಅಲೆಯ ಸಿದ್ಧತೆ ಬಹುತೇಕ ಪೂರ್ಣಗೊಳಿಸುವುದರೊಂದಿಗೆ ಆರೋಗ್ಯ ಇಲಾಖೆ ಕಳೆದ ಹಲವು ತಿಂಗಳಿನಿAದ ತಂಡದ ಮೂಲಕ ವಿವಿಧ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ನಡೆಸುವುದು, ಇದರೊಂದಿಗೆ ಕೋವಿಡ್ ಲಸಿಕೆ ನೀಡುವ ಕೆಲಸ ನಿರಂತರವಾಗಿ ಸಾಗಿದ್ದು, ಅಲ್ಲದೇ ಕೋವಿಡ್ ಹೊರತಾಗಿ ಬರುವ ಸಾಂಕ್ರಾಮಿಕ ರೋಗಗಳಿಗೆ ತುತ್ತಾದ ಜನರ ಆರೈಕೆ ಮಾಡುವಲ್ಲಿ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳು ಯಶಸ್ವಿ ಕಂಡಿದೆ ಎಂದು ಡಾ. ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

೧೬೮ ಮಂದಿ ಬಲಿ

ಕೋವಿಡ್-೧೯ ಪರೀಕ್ಷೆಗೆ ತಾಲೂಕಿನಲ್ಲಿ ಇದುವರೆಗೆ ಒಂದು ಲಕ್ಷದ ೨೦ ಸಾವಿರಕ್ಕೂ ಅಧಿಕ ಮಂದಿ ಒಳಗಾಗಿದ್ದು, ಇದರಲ್ಲಿ ೧೨ ಸಾವಿರದ ೪೦೮ ಮಂದಿಗೆ ಸೋಂಕು ದೃಢಪಟ್ಟು ಚಿಕಿತ್ಸೆಗೆ ಒಳಗಾಗಿದ್ದರು. ಇವರಲ್ಲಿ ೬೫೪ ಮಂದಿ ಹೊರ ಜಿಲ್ಲೆ, ರಾಜ್ಯದ ನಿವಾಸಿಗಳಾಗಿದ್ದಾರೆ ಎಂಬ ಮಾಹಿತಿಯನ್ನ ಡಾ. ಶ್ರೀನಿವಾಸ್ ನೀಡಿದ್ದಾರೆ.

ಇದುವರೆಗೆ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು ೧೬೮ ಜನ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.

ಲಸಿಕೆ ಯಶಸ್ವಿ

ಕೋವಿಡ್ ಲಸಿಕೆಯನ್ನು ತಾಲೂಕಿನ ವಿವಿಧೆಡೆ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದು, ಇದುವರೆಗೆ ೭೬ ಸಾವಿರದ ೭೩ ಮಂದಿಗೆ ಪ್ರಥಮ ಹಂತದ ಲಸಿಕೆ ನೀಡಲಾಗಿದೆ. ೧೩,೪೪೯ ಮಂದಿ ೨ನೇ ಹಂತದ ಲಸಿಕೆ ಪಡೆದುಕೊಂಡಿದ್ದಾರೆ, ಜೂನ್ ೨೧ರ ಲಸಿಕಾ ಮೇಳದಲ್ಲಿ ಒಂದೇ ದಿನ ೩೩೦೦ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ ಎಂದಿದ್ದಾರೆ.

ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ ಇದುವರೆಗೆ ೬೮೭೬, ಕುಶಾಲನಗರದಲ್ಲಿ ೧೨೦೭೭, ಸುಂಟಿಕೊಪ್ಪದಲ್ಲಿ ೫೬೯೬, ಕೂಡಿಗೆಯಲ್ಲಿ ೪೮೦೭, ಚೆಟ್ಟಳ್ಳಿಯಲ್ಲಿ ೪೨೮೩, ಶನಿವಾರಸಂತೆಯಲ್ಲಿ ೩೪೨೯ ಮಂದಿ ಪ್ರಥಮ ಹಂತದ ಲಸಿಕೆ ಪಡೆಯುವುದರೊಂದಿಗೆ ೧೬ ಲಸಿಕಾ ಕೇಂದ್ರಗಳಲ್ಲಿ ಒಟ್ಟು ೬೨೬೨೪ ಮಂದಿ ಪಡೆದಿದ್ದು, ೨ನೇ ಹಂತದ ಲಸಿಕೆ ೧೩೪೪೯ ಮಂದಿಗೆ ನೀಡಲಾಗಿದೆ. ಒಟ್ಟು ೭೬೦೭೩ ಮಂದಿ ತಾಲೂಕಿನ ವಿವಿಧೆಡೆ ಲಸಿಕೆ ಪಡೆದಿದ್ದಾರೆ.

ಮೂರನೇ ಅಲೆಗೆ ಸಿದ್ಧತೆ

ಸಂಭಾವ್ಯ ೩ನೇ ಅಲೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಶ್ರೀನಿವಾಸ್, ಸರ್ಕಾರದ ಸೂಚನೆಯಂತೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆ, ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸುವ ಮೂಲಕ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ೩ನೇ ಅಲೆಯಿಂದ ಪಾರಾಗಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ. ಪ್ರತಿ ಗ್ರಾಮ ಮಟ್ಟದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ ಎಂದು ಮಾಹಿತಿ ಒದಗಿಸಿದ್ದಾರೆ. ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಇದುವರೆಗೆ ೧೦೧ ಮಂದಿ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಕಂಡುಬAದಿದ್ದು, ಗುಣಮುಖರಾಗಿ ಸೇವೆಯಲ್ಲಿದ್ದಾರೆ. ಪ್ರಸಕ್ತ ೧೦ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು ೧೬೮ ಜನ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.

ಲಸಿಕೆ ಯಶಸ್ವಿ

ಕೋವಿಡ್ ಲಸಿಕೆಯನ್ನು ತಾಲೂಕಿನ ವಿವಿಧೆಡೆ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದು, ಇದುವರೆಗೆ ೭೬ ಸಾವಿರದ ೭೩ ಮಂದಿಗೆ ಪ್ರಥಮ ಹಂತದ ಲಸಿಕೆ ನೀಡಲಾಗಿದೆ. ೧೩,೪೪೯ ಮಂದಿ ೨ನೇ ಹಂತದ ಲಸಿಕೆ ಪಡೆದುಕೊಂಡಿದ್ದಾರೆ, ಜೂನ್ ೨೧ರ ಲಸಿಕಾ ಮೇಳದಲ್ಲಿ ಒಂದೇ ದಿನ ೩೩೦೦ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ ಎಂದಿದ್ದಾರೆ.

ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ ಇದುವರೆಗೆ ೬೮೭೬, ಕುಶಾಲನಗರದಲ್ಲಿ ೧೨೦೭೭, ಸುಂಟಿಕೊಪ್ಪದಲ್ಲಿ ೫೬೯೬, ಕೂಡಿಗೆಯಲ್ಲಿ ೪೮೦೭, ಚೆಟ್ಟಳ್ಳಿಯಲ್ಲಿ ೪೨೮೩, ಶನಿವಾರಸಂತೆಯಲ್ಲಿ ೩೪೨೯ ಮಂದಿ ಪ್ರಥಮ ಹಂತದ ಲಸಿಕೆ ಪಡೆಯುವುದರೊಂದಿಗೆ ೧೬ ಲಸಿಕಾ ಕೇಂದ್ರಗಳಲ್ಲಿ ಒಟ್ಟು ೬೨೬೨೪ ಮಂದಿ ಪಡೆದಿದ್ದು, ೨ನೇ ಹಂತದ ಲಸಿಕೆ ೧೩೪೪೯ ಮಂದಿಗೆ ನೀಡಲಾಗಿದೆ. ಒಟ್ಟು ೭೬೦೭೩ ಮಂದಿ ತಾಲೂಕಿನ ವಿವಿಧೆಡೆ ಲಸಿಕೆ ಪಡೆದಿದ್ದಾರೆ.

ಮೂರನೇ ಅಲೆಗೆ ಸಿದ್ಧತೆ

ಸಂಭಾವ್ಯ ೩ನೇ ಅಲೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಶ್ರೀನಿವಾಸ್, ಸರ್ಕಾರದ ಸೂಚನೆಯಂತೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆ, ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸುವ ಮೂಲಕ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ೩ನೇ ಅಲೆಯಿಂದ ಪಾರಾಗಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ. ಪ್ರತಿ ಗ್ರಾಮ ಮಟ್ಟದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ ಎಂದು ಮಾಹಿತಿ ಒದಗಿಸಿದ್ದಾರೆ. ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಇದುವರೆಗೆ ೧೦೧ ಮಂದಿ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಕಂಡುಬAದಿದ್ದು, ಗುಣಮುಖರಾಗಿ ಸೇವೆಯಲ್ಲಿದ್ದಾರೆ. ಪ್ರಸಕ್ತ ೧೦ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.