ಪೊನ್ನಂಪೇಟೆ, ಜೂ. ೨೫: ಮಾಯಮುಡಿ ಸಮೀಪದ ಧನುಗಾಲ ಗ್ರಾಮದಲ್ಲಿರುವ ಶ್ರೀ ಮುರುಡೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅನ್ನದಾಸೋಹ ಭವನಕ್ಕೆ ಧರ್ಮಸ್ಥಳ ಶ್ರೀ ಕ್ಷೇತ್ರ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದೆ. ದೇವಸ್ಥಾನದ ಆಡಳಿತ ಮಂಡಳಿಯವರ ಕೋರಿಕೆಗೆ ಸ್ಪಂದಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ರೂ. ೧ ಲಕ್ಷ ಮೊತ್ತದ ಚೆಕ್ ಕಳಿಸಿದ್ದು, ಅದು ಆಡಳಿತ ಮಂಡಳಿಯ ಕೈ ಸೇರಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಪಿ. ವೀರಪ್ಪ ತಿಳಿಸಿದ್ದಾರೆ.