ಕುಶಾಲನಗರ, ಜೂ.೨೫: ವಾರಾಂತ್ಯದ ಹಿನೆÀ್ನಲೆಯಲ್ಲಿ ಕೊಡಗು ಜಿಲ್ಲೆಗೆ ನೆರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸುವುದರೊಂದಿಗೆ ಶುಕ್ರವಾರ ಬೆಳಗ್ಗೆ ೨ ಗಂಟೆಗಳ ಕಾಲ ಹೆದ್ದಾರಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ದೃಶ್ಯ ಕುಶಾಲನಗರ ಮೈಸೂರು ರಸ್ತೆಯಲ್ಲಿ ಕಂಡುಬAತು.
ಮೈಸೂರು-ಕುಶಾಲನಗರ ಹೆದ್ದಾರಿ ರಸ್ತೆಯಲ್ಲಿ ಕುಶಾಲನಗರ- ಕೊಪ್ಪ ಗೇಟ್ ಬಳಿಯಿಂದ ಸುಮಾರು ೨ ಕಿ.ಮೀ ಉದ್ದದ ತನಕ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಸಂಚರಿಸಲು ಆಗದೇ ಸ್ಥಗಿತಗೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಕುಶಾಲನಗರ ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ವಾಹನಗಳಲ್ಲಿ ಬಂದ ವ್ಯಕ್ತಿಗಳ ಮಾಹಿತಿ ಕಲೆ ಹಾಕಲು ಕೇಂದ್ರದ ಸಿಬ್ಬಂದಿಗಳು ಪರದಾಡುವಂತಹ ಸ್ಥಿತಿ ಕಂಡುಬAತು. ಬೆಳಗ್ಗೆ ೮.೩೦ ರಿಂದ ೨ ಗಂಟೆಗಳ ಕಾಲ ರಸ್ತೆಯಲ್ಲಿ ಸುಮಾರು ೨ ಕಿ.ಮೀ ಉದ್ದಕ್ಕೂ ವಾಹನಗಳ ಸಾಲು ಕಂಡುಬAತು.