ಮಡಿಕೇರಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಆಯುಷ್ ಇಲಾಖೆಯ ಸಹಭಾಗಿತ್ವದಲ್ಲಿ ವರ್ಚುವಲ್ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ವರ್ಚುವಲ್ ಯೋಗದಲ್ಲಿ ಒಟ್ಟು ೫೬ ಮಂದಿ ಭಾಗವಹಿಸಿದ್ದರು. ಮಡಿಕೇರಿಯ ಯೋಗ ಗುರು ಮಹೇಶ್ ಕೆ.ಕೆ. ಅವರು ಯೋಗ ಪ್ರಾತ್ಯಕ್ಷಿಕತೆ ನಡೆಸಿಕೊಟ್ಟರು. ಬಿ.ಎನ್.ವೈ.ಎಸ್. (ಬ್ಯಾಚುಲರ್ ಆಫ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್) ಡಾ. ವಿನಯ ಅವರು ಯೋಗದಿಂದ ಬೆಳೆಸಿಕೊಳ್ಳಬಹುದಾದ ರೋಗನಿರೋಧಕ ಶಕ್ತಿಯ ಕುರಿತು ಮಾಹಿತಿ ನೀಡಿದರು.

ಪುತ್ತೂರಿನ ರಾಘವೇಂದ್ರ ಪ್ರಸಾದ್ ಮಾತನಾಡಿ, ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟಲು ಯೋಗದ ಮಹತ್ವವನ್ನು ತಿಳಿಸಿಕೊಟ್ಟರು. ವರ್ಚುವಲ್ ಯೋಗದಲ್ಲಿ ಮಡಿಕೇರಿಯ ಆರ್ಯುವೇದ ವೈದ್ಯ ರಾಜಾರಾಮ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಡಾ. ಮೋಹನ್ ಅಪ್ಪಾಜಿ, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ರಾಜೇಶ್ ಯಲ್ಲಪ್ಪ, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.ವೀರಾಜಪೇಟೆ: ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಕಲ್ಲುಬಾಣೆ ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ ವತಿಯಿಂದ ವಿಶ್ವ ಯೋಗ ದಿನದ ಅಂಗವಾಗಿ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಮಂಡಳಿಯ ಸದಸ್ಯರು ಯೋಗಭ್ಯಾಸ ಮಾಡುವುದರ ಮುಖಾಂತರ ಯೋಗ ದಿನ ಆಚರಿಸಿದರು.

ಈ ಸಂದರ್ಭ ಸದಸ್ಯರಾದ ಬಿ.ಎ. ರೇಷ್ಮ, ಬಿ.ಜಿ. ಮೀನಾಕ್ಷಿ, ಸರಸು, ಸಾವಿತ್ರಿ, ಕಮಲ ಸೇರಿದಂತೆ ಇತರರು ಇದ್ದರು.ನಾಪೋಕ್ಲು: ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಸಮೀಪದ ಬಲ್ಲಮಾವಟಿ ಗ್ರಾಮದ ಆಯುಷ್ ಆಯುರ್ವೇದ ಕೇಂದ್ರದ ವತಿಯಿಂದ ಆಚರಿಸಲಾಯಿತು. ಆಯುಷ್ ಅಧಿಕಾರಿ ಡಾ. ಕೆ.ಜಿ. ಶುಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಯೋಗವು ದೈಹಿಕ ಹಾಗೂ ಮಾನಸಿಕ ಆಚರಣೆಗಳ ಶಾಖೆಯಾಗಿ ಬೋಧನೆಯೊಂದಿಗೆ ಬೆಳೆದು ಬಂದಿದೆ. ಮಾನಸಿಕ ಮೌಖಿಕ ವ್ಯಕ್ತಿ ವಿಕಸನಕ್ಕೆ ಯೋಗ ಬಹುಮುಖ್ಯ ಪಾತ್ರ ವಹಿಸುತ್ತದೆ. ಯೋಗ ಎಂದರೆ ಶರೀರವನ್ನು ಆರೋಗ್ಯದೊಂದಿಗೆ ಆತ್ಮವನ್ನು ಪರಮಾತ್ಮನೊಂದಿಗೆ ಸಂಯೋಗಗೊಳಿಸುವ ಎಂಬ ಅರ್ಥವನ್ನು ಹೊಂದಿದೆ. ಯೋಗಾಭ್ಯಾಸದ ಮೂಲಕ ಬಲಯುತವಾದ ದೇಹವನ್ನು ಅಲ್ಲದೆ ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳಲು ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗಿದೆ ಎಂದರು. ದಿನದಲ್ಲಿ ೩೦ ನಿಮಿಷ ಯೋಗಾಸನ, ೧೫ ನಿಮಿಷ ಪ್ರಾಣಾಯಾಮ ಹಾಗೂ ೧೦ ನಿಮಿಷ ಧ್ಯಾನವನ್ನು ಮಾಡಿ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದರು. ಕಾರ್ಯಕ್ರಮದಲ್ಲಿ ಎಸ್.ಎಸ್. ನ್ಯೂಸ್ ವ್ಯವಸ್ಥಾಪಕರು, ಯೋಗ ಶಿಕ್ಷಕಿ ಕೆ.ಬಿ. ಪವಿತ್ರ ಯೆಡಿಕೇರಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.