ಮಡಿಕೇರಿ: ಬಲಿದಾನ ದಿವಸವನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಉಪಸ್ಥಿತಿಯಲ್ಲಿ ನಡೆಸಲಾಯಿತು. ನಗರ ಬಿಜೆಪಿ ಅಧ್ಯಕ್ಷರು ಮನು ಮಂಜುನಾಥ್, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ನಗರ ಬಿಜೆಪಿ ಕಾರ್ಯಾಧ್ಯಕ್ಷರಾದ ಉಮೇಶ್ ಸುಬ್ರಮಣಿ ಹಾಗೂ ಅಪ್ಪಣ್ಣ, ನೆರವಂಡ ಜೀವನ್, ಡಿಷು, ಧನಂಜಯ್, ಪಾಂಡಿರ ಪೂಣಚ್ಚ ಹಾಗೂ ನಗರಸಭೆ ಸದಸ್ಯರಾದ ಶ್ವೇತಾ ಪ್ರಶಾಂತ್, ಸಾಬಿತ, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮಡಿಕೇರಿ: ಬಲಿದಾನ ದಿವಸವನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಉಪಸ್ಥಿತಿಯಲ್ಲಿ ನಡೆಸಲಾಯಿತು. ನಗರ ಬಿಜೆಪಿ ಅಧ್ಯಕ್ಷರು ಮನು ಮಂಜುನಾಥ್, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ನಗರ ಬಿಜೆಪಿ ಕಾರ್ಯಾಧ್ಯಕ್ಷರಾದ ಉಮೇಶ್ ಸುಬ್ರಮಣಿ ಹಾಗೂ ಅಪ್ಪಣ್ಣ, ನೆರವಂಡ ಜೀವನ್, ಡಿಷು, ಧನಂಜಯ್, ಪಾಂಡಿರ ಪೂಣಚ್ಚ ಹಾಗೂ ನಗರಸಭೆ ಸದಸ್ಯರಾದ ಶ್ವೇತಾ ಪ್ರಶಾಂತ್, ಸಾಬಿತ, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಗುಡ್ಡೆಹೊಸೂರು: ಶ್ಯಾಂಪ್ರಸಾದ್ ಮುಖರ್ಜಿ ಅವರ ೬೮ನೇ ವರ್ಷದ ಪುಣ್ಯಸ್ಮರಣೆಯನ್ನು ಗುಡ್ಡೆಹೊಸೂರು ಬಿ.ಜೆ.ಪಿ. ಶಕ್ತಿ ಕೇಂದ್ರದ ವತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಇಲ್ಲಿನ ಗ್ರಾ.ಪಂ. ಸದಸ್ಯರು ಮತ್ತು ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ನಿತ್ಯ ಕುಡೆಕ್ಕಲ್ ಪ್ರವೀಣ್ ಹಾಗೂ ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಸುಶೀಲ, ಸೌಮ್ಯ, ಗಂಗಮ್ಮ ಎಂ.ಆರ್. ಮಾದಪ್ಪ, ಬಿ.ಜೆ.ಪಿ. ಕಾರ್ಯಕರ್ತ ಪ್ರವೀಣ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷೆ ಪುಷ್ಪನಾಗೇಶ್ ಹಾಜರಿದ್ದು ಮುಖರ್ಜಿಯವರ ಜೀವನದ ಸಾಧನೆ ಬಗ್ಗೆ ವಿವರಿಸಿದರು.*ಗೋಣಿಕೊಪ್ಪ: ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯನ್ನು ವೀರಾಜಪೇಟೆ ತಾಲೂಕು ಬಿಜೆಪಿ ಮಂಡಲ ವತಿಯಿಂದ ಗಿಡ ನೆಡುವ ಮೂಲಕ ಆಚರಿಸಲಾಯಿತು. ತಾಲೂಕು ಮಂಡಲ ಅಧ್ಯಕ್ಷ ನಲ್ಲಿರ ಚಲನ್ ಕುಮಾರ್ ಅವರ ಉಪಸ್ಥಿತಿಯಲ್ಲಿ ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೆರ ಈಶ್ವರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ ಸೇರಿದಂತೆ ತಾಲೂಕು ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದು ವಿವಿಧ ಬಗೆಯ ಗಿಡಗಳನ್ನು ನೆಟ್ಟರು.ಹಾಕತ್ತೂರು: ಬಿಜೆಪಿ ಮಂಡಳ ಮಡಿಕೇರಿ, ಬಿಜೆಪಿ ರೈತ ಮೋರ್ಚಾ-ಕೊಡಗು ಜಿಲ್ಲೆ ಹಾಗೂ ಹಾಕತ್ತೂರು ಶಕ್ತಿ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಲಿದಾನ್ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಾಕತ್ತೂರುವಿನ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಡೆಸಲಾಯಿತು. ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗಿರ ಸತೀಶ್, ಜಿಲ್ಲಾ ರೈತ ಮೋರ್ಚಾ ಸಹಕಾರ್ಯದರ್ಶಿ ಪೈಕೆರ ಮನೋಹರ್ ಮಾದಪ್ಪ, ಹಾಕತ್ತೂರು ಶಕ್ತಿ ಕೇಂದ್ರ ಪ್ರಮುಖ್ ಪಿ.ಪಿ. ಸುಕುಮಾರ್, ಜಿಲ್ಲಾ ರೈತ ಮೋರ್ಚಾ ಸದಸ್ಯ ಹಾಗೂ ಸಹಪ್ರಮುಖ ಅಮ್ಮಾಟಂಡ ಪೂಣಚ್ಚ ಹಾಗೂ ಮಡಿಕೇರಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ತೋರೆರ ಹೇಮಂತ್, ಗ್ರಾ.ಪಂ. ಸದಸ್ಯರಾದ ಯೋಗೇಶ್, ಶೀಲಾವತಿ, ಅಮ್ಮಾಟಂಡ ಗಣೇಶ್ ಪ್ರಸಾದ್, ಕರುಂಭಯ್ಯ, ದೇವಯ್ಯ, ಕಾಳಯ್ಯ, ಚಿಣ್ಣಪ್ಪ ಹಾಗೂ ಸುರೇಶ ಇದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ಶಕ್ತಿ ಕೇಂದ್ರದ ವತಿಯಿಂದ ಶ್ಯಾಂಪ್ರಸಾದ್ ಮುಖರ್ಜಿ ಅವರ ಪುಣ್ಯ ತಿಥಿಯನ್ನು ಈ ಸಂದರ್ಭ ಶಕ್ತಿಕೇಂದ್ರದ ಪ್ರಮುಖರಾದ ಮೂಕಳೇರ ಮಧು ಕುಮಾರ ಮತ್ತು ಕೋಟೆರಾ ಕಿಶನ್ ಉತ್ತಪ್ಪ ಅವರ ನೇತೃತ್ವದಲ್ಲಿ ಶ್ಯಾಂಪ್ರಸಾದ್ ಮುಖರ್ಜಿ ಭಾವಚಿತ್ರವನ್ನಿಟ್ಟು ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭ ಮಹಾಶಕ್ತಿ ಕೇದ್ರದ ಸಂಚಾಲಕ ಅಲೆಮಾಡ ಸುಧೀರ್ ಹಾಜರಿದ್ದರು. ಹಿರಿಯ ಕಾರ್ಯಕರ್ತ ಮುದ್ದಿಯೇಡ ಬೋಸ್ ಸೋಮಯ್ಯ ಶಾಮ್ ಪ್ರಸಾದ್ ಮುಖರ್ಜಿ ಅವರ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ರಾಮಕೃಷ್ಣ, ಮತ್ತಿತರರು ಹಾಜರಿದ್ದರು.