ಕಡಂಗ, ಜೂ. ೨೪: ಕೋವಿಡ್-೧೯ ರ ಸಮಸ್ಯೆಯಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ವಿಭಾಗವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಶಿಕ್ಷಣ ಸಚಿವರಿಗೆ ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಆನ್‌ಲೈನ್ ತರಗತಿಯ ಹೆಸರಿನಲ್ಲಿ ಶುಲ್ಕ ಮತ್ತು ಡೊನೇಶನ್ ರೂಪದಲ್ಲಿ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ತೊಂದರೆ ನೀಡುತ್ತಿರುವ ಮತ್ತು ಅರಿವು ಲೋನ್ ಮಂಜೂರು, ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದ ಗೊಂದಲ, ಓಅಂಊP-೨೧ ಬಿಲ್ ಅನುಷ್ಠಾನಗೊಳಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಲಾಗಿದೆ. ಈ ಕುರಿತು ಮಾತನಾಡಿದ ಶಾಸಕರು ಈ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಅಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ ಪ್ರಧಾನ ಕಾರ್ಯದರ್ಶಿ ಮುಜೀಬ್ ಕೊಂಡAಗೇರಿ ಹೊಸತೋಟದ ಉನೈಸ್ ಶಿಹಾಬ್ ತಂಙ್ಞಳ್ ಸಲೀಂ ಭಾಗಿಯಾಗಿದ್ದರು.

ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಶಾಸಕರುಗಳ ಮುಖಾಂತರ ಶಿಕ್ಷಣ ಸಚಿವರಿಗೆ ಎಸ್‌ಎಸ್‌ಎಫ್‌ನಿಂದ ಇದೇ ರೀತಿ ಮನವಿ ಸಲ್ಲಿಸಲಾಗುತ್ತಿದ್ದು ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯನವರಿಗೂ ಮನವಿ ಸಲ್ಲಿಸಲಾಗುವುದು ಎಂದು ಎಸ್‌ಎಸ್‌ಎಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಜುನೈದ್ ನೆಲ್ಲಿಹುದಿಕೇರಿ ತಿಳಿಸಿದ್ದಾರೆ.