ಕುಶಾಲನಗರ, ಜೂ. ೨೪: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನದಿ ಪಾತ್ರದಲ್ಲಿರುವ ಬಡಾವಣೆಗಳ ಜನರಿಗೆ ಪಂಚಾಯಿತಿ ಕಚೇರಿಯಿಂದ ೨ನೇ ತಿಳುವಳಿಕೆ ಪತ್ರ ನೀಡಲಾಗಿದೆ. ಕಳೆದ ೨೦೧೮ ರಿಂದ ನದಿ ಪಾತ್ರದ ಬಡಾವಣೆಗಳು ಕಾವೇರಿ ನದಿ ಪ್ರವಾಹದಿಂದ ಮುಳುಗಡೆಯಾಗುತ್ತಿದ್ದು, ಪ್ರಸ್ತುತ ಸಾಲಿನ ಮಳೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರದ ನದಿ ಪಾತ್ರದ ೨೦ಕ್ಕೂ ಅಧಿಕ ಬಡಾವಣೆಗಳಲ್ಲಿ ವಾಸವಿರುವ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ತೆರಳಲು ಎಚ್ಚರಿಕೆ ವಹಿಸುವಂತೆ ತಿಳುವಳಿಕೆ ಪತ್ರದಲ್ಲಿ ಸೂಚಿಸಿದ್ದಾರೆ.
ಇದೇ ರೀತಿ ನೆರೆಯ ಹಾರನಹಳ್ಳಿ ಹೋಬಳಿ ಕೊಪ್ಪ ಮತ್ತು ಸುತ್ತಮುತ್ತಲ ನದಿ ಪಾತ್ರದ ವ್ಯಾಪ್ತಿಯ ನಿವಾಸಿಗಳಿಗೆ ಪಿರಿಯಾಪಟ್ಟಣ ತಹಶೀಲ್ದಾರ್ ತಿಳುವಳಿಕೆ ಪತ್ರ ನೀಡಿದ್ದು, ಇಲ್ಲಿನ ಮನೆ ಅಂಗಡಿಗಳ ಮಾಲೀಕರು ಜೂನ್ ನಿಂದ ಸೆಪ್ಟೆಂಬರ್ ೨೦೨೧ ರ ತನಕ ೪ ತಿಂಗಳ ಕಾಲ ಸ್ವಯಂ ಪ್ರೇರಿತವಾಗಿ ಮನೆಯ ಎಲ್ಲಾ ವಸ್ತುಗಳು ಮತ್ತು ಅಂಗಡಿ ಸಾಮಾನುಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿಕೊAಡು ನಷ್ಟದಿಂದ ತಪ್ಪಿಸಿಕೊಳ್ಳುವಂತೆ ಸೂಚಿಸಿದ್ದಾರೆ.