ಮಡಿಕೇರಿ, ಜೂ. ೨೩: ಕೊರೊನಾ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದಾಸ ಸಾಹಿತ್ಯದ ಹಾಡುಗಳನ್ನು ಹಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. (ಪುರಂದರದಾಸ, ಕನಕದಾಸ, ವ್ಯಾಸತೀರ್ಥರು, ಶ್ರೀಪಾದರಾಯರು, ಗೋಪಾಲದಾಸ, ಶ್ರೀ ರಾಘವೇಂದ್ರ ತೀರ್ಥರು, ಹೀಗೆ) ಕಾರ್ಯಕ್ರಮವು ಪ್ರತಿದಿನ ಒಂದೂವರೆ ಗಂಟೆಗೆ ನಡೆಯಲಿದೆ. ದಾಸರು ರಚಿಸಿದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಇದಾಗಿದ್ದು ಎಲ್ಲರಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವವರಿಗೆ ವಯಸ್ಸಿನ ಮಿತಿ ಇರುವುದಿಲ್ಲ.
ಕಾರ್ಯಕ್ರಮದಲ್ಲಿ ಭಾಗವಹಿಸುವರು ತಮ್ಮ ಹೆಸರು, ವಿಳಾಸವನ್ನು ಮತ್ತು ವಾಟ್ಸಪ್ ದೂರವಾಣಿ ಸಂಖ್ಯೆಯನ್ನು ವಾಟ್ಸಪ್ ಮೂಲಕ ಕಳುಹಿಸತಕ್ಕದ್ದು, ಆಸಕ್ತರು ತಾ. ೨೬ ರ ಒಳಗಾಗಿ ನೋಂದಣಿ ಮಾಡಿಕೊಳ್ಳತಕ್ಕದ್ದು. ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ.ಪಿ (೯೪೪೮೩೪೬೨೭೬) ಕಾರ್ಯಕ್ರಮದ ಸಂಯೋಜಕ ಅಂಬೆಕಲ್ ನವೀನ್ (೯೪೪೮೦೦೫೬೪೨) ಅವರ ಸಂಖ್ಯೆಗೆ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹೆಸರುಗಳು ನೋಂದಣಿ ಆದ ನಂತರ ಕಾರ್ಯಕ್ರಮದ ರೂಪುರೇಷೆಗಳನ್ನು ವಾಟ್ಸಪ್ ಮೂಲಕ ಕಳುಹಿಸಿಕೊಡಲಾಗುವುದು ಎಂದು ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.