ಮಡಿಕೇರಿ, ಜೂ. ೨೩: ಮಡಿಕೇರಿ

ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಡಿಎಫ್‌ಓ) ನಿಯುಕ್ತಿಗೊಂಡಿರುವ ಕೊಡಗು ಮೂಲದವರೇ ಆದ ಅಧಿಕಾರಿ ಅಜ್ಜಿಕುಟ್ಟೀರ ಟಿ. ಪೂವಯ್ಯ ಅವರು ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ.

ಪೂವಯ್ಯ ಅವರು ಈ ಹಿಂದೆ ಮೈಸೂರು ಅರಣ್ಯ ಸಂಚಾರಿದಳದಲ್ಲಿ ಡಿಎಫ್‌ಓ ಆಗಿದ್ದು, ಇದೀಗ ಮಡಿಕೇರಿಗೆ ವರ್ಗಾವಣೆಯಾಗಿದ್ದಾರೆ. ಈತನಕ ಮಡಿಕೇರಿ ಡಿಎಫ್‌ಓ ಆಗಿದ್ದ ಪ್ರಭಾಕರನ್ ಅವರು ಇದೀಗ ಭದ್ರಾ ಅರಣ್ಯ ವಿಭಾಗಕ್ಕೆ ನಿಯೋಜಿತರಾಗಿದ್ದಾರೆ.