ಗೋಣಿಕೊಪ್ಪ ವರದಿ, ಜೂ. ೨೪: ಮಾಯಮುಡಿಯಲ್ಲಿ ನಡೆಯಬೇಕಿದ್ದ ಕಾಡಾನೆ ಕಾರ್ಯಾಚರಣೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ.

ರುದ್ರಬೀಡು ಗ್ರಾಮದ ಚೆಪ್ಪುಡೀರ ಗಣೇಶ್ ತಿಮ್ಮಯ್ಯ (೬೮) ಹಾಗೂ ಧನುಗಾಲ ಗ್ರಾಮದ ಕಾರ್ಮಿಕ ನಾರಾಯಣ (೪೦) ಎಂಬವರುಗಳು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆ ಅಂತ್ಯಕ್ರಿಯೆಗೆ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ ತಿತಿಮತಿ ವಲಯ ಅರಣ್ಯ ಇಲಾಖೆ ಆರ್‌ಆರ್‌ಟಿ ತಂಡ ಮಾಯಮುಡಿ, ಬಾಳಾಜಿ, ಧನುಗಾಲ, ಕೋಣನಕಟ್ಟೆ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಓಡಿಸಲು ಗುರುವಾರ ರೂಪಿಸಿದ್ದ ಕಾರ್ಯಾಚರಣೆಯನ್ನು ಮುಂದೂಡಿತು. ಭಾನುವಾರ ಬೆಳಿಗ್ಗೆ ೯ ಗಂಟೆಯಿAದ ಸಂಜೆವರೆಗೂ ಕಾರ್ಯಾಚರಣೆ ನಡೆಸುವ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು. ಭದ್ರಗೋಳದಲ್ಲಿ ಸುಮಾರು ೧೦ ಕಾಡಾನೆಗಳು ಸೇರಿಕೊಂಡಿರುವ ಬಗ್ಗೆ ಪತ್ತೆಹಚ್ಚಲಾಯಿತು.