ವೀರಾಜಪೇಟೆ, ಜೂ:. ೨೪: ವೀರಾಜಪೇಟೆಯ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿಯಾಗಿ ಸಿ.ಬಿ. ಶ್ರೀಧರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ವಿಭಾಗದ ಠಾಣಾಧಿಕಾರಿಯಾಗಿ ಜಗದೀಶ್ ಧೂಳ ಶೆಟ್ಟಿ ಅವರು ಕಾರ್ಯನಿರ್ವಹಿಸಿದ್ದರು. ನಂತರದಲ್ಲಿ ವೀರಾಜಪೇಟೆ ನಗರಠಾಣೆಗೆ ವರ್ಗಾವಣೆಗೊಂಡ ಹಿನೆÀ್ನಲೆಯಲ್ಲಿ ಸಿ.ಬಿ. ಶ್ರೀಧರ್ ಅವರು ಮುಂಬಡ್ತಿ ಹೊಂದಿ ಅಧಿಕಾರ ಸ್ವೀಕರಿಸಿದ್ದಾರೆ.