*ವೀರಾಜಪೇಟೆ, ಜೂ. ೨೩: ವೀರಾಜಪೇಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಎರಡು ಮುಕ್ಕಾಲು ವರ್ಷ ಕರ್ತವ್ಯ ನಿರ್ವಹಿಸಿದ ಎ.ಎಂ. ಶ್ರೀಧರ್ ಅವರು ಮೈಸೂರಿನ ಶ್ರೀರಾಂಪುರದ ಪಟ್ಟಣ ಪಂಚಾಯತಿಗೆ ವರ್ಗಾವಣೆ ಆಗಿದ್ದು, ಇಂದು ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಪ್ರಬಾರ ಮುಖ್ಯಾಧಿಕಾರಿ ಹೇಮ್‌ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ವೀರಾಜಪೇಟೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆ ಆಗಿ ಬಂದಾಗ ಇಲ್ಲಿ ಮಳೆಗಾಲದಲ್ಲಿ ಪ್ರವಾಹದಿಂದ ಸಾಕಷ್ಟು ತೊಂದರೆ ಆಗಿತ್ತು. ಭೌಗೋಳಿಕವಾಗಿ ಸವಾಲಾಗಿರುವ ವೀರಾಜಪೇಟೆಯಲ್ಲಿ ಕೆಲಸ ಮಾಡುವುದು ಒಳ್ಳೆಯ ಅನುಭವ ನೀಡಿಕೆ.

ಕಸ ವಿಲೇವಾರಿಗೆ ಸಂಬAಧಿಸಿದAತೆ ಬೆಟ್ಟದಷ್ಟಿದ್ದ ಪ್ಲಾಸ್ಟಿಕ್ ಅನ್ನು ಏಜೆನ್ಸಿ ಮೂಲಕ ಸಿಮೆಂಟ್ ಕಾರ್ಖಾನೆಗೆ ನೀಡಿ ಕಸ ತ್ಯಾಜ್ಯ ಘಟಕವನ್ನು ಸ್ವಚ್ಛಮಾಡಲಾಗಿದೆ. ನೀರು ಸರಬರಾಜಿನ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಹೀಗೆ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು. ಪಟ್ಟಣದ ಜನತೆ ಹಾಗೂ ಆಡಳಿತ ಮಂಡಳಿ, ಜನಪ್ರತಿನಿಧಿಗಳು ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು. ನಂತರ ಅಧಿಕಾರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಮ್ಯುನಿಟಿ ಡೆವಲಪ್‌ಮೆಂಟ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶೈಲಾ ಅವರು ನಾಗಮಂಗಲದ ಮುಖ್ಯಾಧಿಕಾರಿ ಯಾಗಿ ವರ್ಗಾವಣೆ ಆಗುತ್ತಿರು ವುದರಿಂದ ಅವರಿಗೂ ಈ ಸಂದರ್ಭದಲ್ಲಿ ಬೀಳ್ಕೊಡುಗೆ ನೀಡಲಾಯಿತು. ತಾಲೂಕು ದಂಡಾಧಿಕಾರಿ ಯೋಗಾನಂದ್, ಪಟ್ಟಣ ಪಂಚಾಯತ್ ಸರ್ವ ಸದಸ್ಯರು, ಪೌರಕಾರ್ಮಿಕರು, ಗುತ್ತಿಗೆದಾರರು ಹಾಜರಿದ್ದರು.