ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್ ಬಂಧನ!

ಮುAಬೈ, ಜೂ. ೨೩: ಅಂಡರ್‌ವರ್ಡ್ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್‌ನನ್ನು ಎನ್‌ಸಿಬಿ ಅಧಿಕಾರಿಗಳು ಬುಧವಾರ ಮುಂಬೈನಲ್ಲಿ ಬಂಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕ ವಸ್ತು ಸಾಗಣೆ ಪ್ರಕರಣ ಸಂಬAಧ ಕಾಸ್ಕರ್‌ನನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಪಂಜಾಬ್‌ಗೆ ಇಪ್ಪತ್ತೆöÊದು ಕೆ.ಜಿ. ಚರಾಸ್ ಮಾದಕ ವಸ್ತು ತರಲಾಗುತ್ತಿತ್ತು ಮತ್ತು ಅಲ್ಲಿಂದ ಮುಂಬೈಯಲ್ಲಿ ವಿತರಿಸಲಾಗುತ್ತಿತ್ತು. ಇದಕ್ಕೂ ಮುನ್ನ, ಕಾಸ್ಕರ್ ಹಲವು ಲಾಂಡರಿAಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಮಹಾರಾಷ್ಟçದ ಪ್ರಮುಖ ಬಿಲ್ಡರ್‌ನನ್ನು ಸುಲಿಗೆ ಮಾಡಿದ ಆರೋಪಕ್ಕೆ ಸಂಬAಧಿಸಿದAತೆ ಜಾರಿ ನಿರ್ದೇಶನಾಲಯ ಆತನ ವಿರುದ್ಧ ಪ್ರಕರಣ ದಾಖಲಿಸಿದೆ.

ನಿರ್ಗತಿಕರಿಗೆ ಲಸಿಕೆ ನೋಂದಣಿ ನಿರ್ಬಂಧ: ಸುಳ್ಳು ಮಾಹಿತಿ

ನವದೆಹಲಿ, ಜೂ. ೨೩: ಮನೆ ಇಲ್ಲದ ನಿರ್ಗತಿಕರನ್ನು ಕೊರೊನಾ ಲಸಿಕೆ ಪಡೆಯಲು ಲಸಿಕೆ ನೋಂದಣಿ ಪ್ರಕ್ರಿಯೆಯಿಂದ ನಿರ್ಬಂಧಿಸಲಾಗಿದೆ ಎಂಬ ಮಾಧ್ಯಮಗಳ ವರದಿ ಸುಳ್ಳು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಹಿಂದೆ ಮಾಧ್ಯಮಗಳಲ್ಲಿ 'ತಾಂತ್ರಿಕ ಅವಶ್ಯಕತೆಗಳ ಅಲಭ್ಯತೆ' ಕಾರಣ ನೀಡಿ ಕೇಂದ್ರ ಸರ್ಕಾರ ಮನೆ ಇಲ್ಲದ ನಿರ್ಗತಿಕರನ್ನು ಕೊರೊನಾ ಲಸಿಕೆ ಪಡೆಯಲು ಲಸಿಕೆ ನೋಂದಣಿ ಪ್ರಕ್ರಿಯೆಯಿಂದ ನಿರ್ಬಂಧಿಸಲಾಗಿದೆ ಎಂದು ವರದಿ ಮಾಡಿದ್ದವು. ಅಂತೆಯೇ "ಡಿಜಿಟಲ್ ಆಗಿ ನೋಂದಾಯಿಸುವ ಅವಶ್ಯಕತೆ", "ಇಂಗ್ಲಿಷ್ ಜ್ಞಾನ ಮತ್ತು ಕಂಪ್ಯೂಟರ್ ಅಥವಾ ಇಂಟರ್ನೆಟ್‌ಗೆ ಸಂಪರ್ಕ ಹೊಂದಿದ ಸ್ಮಾರ್ಟ್ ಫೋನ್‌ಗೆ ಪ್ರವೇಶ" ಸರ್ಕಾರದ ಈ ಅಂಶಗಳು ಸಮಾಜದ ಕೆಳಸ್ಥರದ ಜನರನ್ನು ಲಸಿಕೆಯ ಹಕ್ಕಿನಿಂದ ವಂಚನೆಗೊಳಗಾಗುವAತೆ ಮಾಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ವರದಿಯನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ, ಇದನ್ನು ಆಧಾರರಹಿತ ಎಂದು ಕರೆದಿದ್ದು, ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದೆ. ಈ ವರದಿಗಳು ಆಧಾರರಹಿತವಾಗಿವೆ ಮತ್ತು ಸತ್ಯಗಳನ್ನು ಆದರಿಸಿಲ್ಲ. ಮೊಬೈಲ್ ಫೋನ್‌ನ ಮಾಲೀಕತ್ವವು ಕೋವಿಡ್ ವ್ಯಾಕ್ಸಿನೇಷನ್‌ಗೆ ಪೂರ್ವಾಪೇಕ್ಷಿತವಲ್ಲ, ವಿಳಾಸ ಪುರಾವೆ ಸಹ ಕಡ್ಡಾಯವಲ್ಲ ಮತ್ತು ಕೋವಿನ್‌ನಲ್ಲಿ ನೋಂದಾಯಿಸುವುದು ಕೂಡ ಲಸಿಕೆ ಪಡೆಯಲು ಕಡ್ಡಾಯವಲ್ಲ ಎಂದು ಹೇಳಿದೆ.

ಮೈಸೂರಿನಲ್ಲಿ ಕೋವಿಡ್-೧೯ ಡೆಲ್ಟಾಪ್ಲಸ್ ಪ್ರಕರಣ ಪತ್ತೆ

ಬೆಂಗಳೂರು, ಜೂ. ೨೩: ಕೊರೊನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಕರುನಾಡಿಗೆ ಮಾರಕ ಡೆಲ್ಟಾಪ್ಲಸ್ ರೂಪಾಂತರಿ ಕೊರೊನಾ ಕಾಲಿಟ್ಟಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರೇ ಇದನ್ನು ಬೆಂಗಳೂರಿನಲ್ಲಿAದು ದೃಢಪಡಿಸಿದ್ದಾರೆ. ಡೆಡ್ಲಿ ಡೆಲ್ಟಾಪ್ಲಸ್ ಎಂಟ್ರಿಯಾಗುತ್ತಿದ್ದAತೆ ರಾಜ್ಯ ಸರ್ಕಾರ ಸಂಪೂರ್ಣ ಅಲರ್ಟ್ ಆಗಿದೆ. ಪ್ರತಿ ಜಿಲ್ಲೆಗಳಲ್ಲೂ ಶೇ. ೫ರಷ್ಟು ರ‍್ಯಾಂಡಮ್ ಟೆಸ್ಟ್ ಮಾಡಬೇಕು. ಅನುಮಾನ ಹೆಚ್ಚಿರುವ ಕಡೆಗಳಲ್ಲಿ ರ‍್ಯಾಂಡಮ್ ಟೆಸ್ಟ್ ಹೆಚ್ಚು ಮಾಡುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಬೆಂಗಳೂರಿನಲ್ಲಿAದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ನಮಗೆ ಅನುಮಾನ ಬರುವ ಕಡೆಗಳಲ್ಲೆಲ್ಲಾ ಇನ್ನೂ ಹೆಚ್ಚು ಪರೀಕ್ಷೆಗಳನ್ನು ಮಾಡಲು ಸೂಚನೆ ನೀಡುತ್ತೇವೆ ಎಂದಿದ್ದಾರೆ. ಮೈಸೂರಿನಲ್ಲಿ ಪತ್ತೆಯಾಗಿದ್ದ ಡೆಲ್ಟಾಪ್ಲಸ್ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ. ಅವರ ಬಗ್ಗೆ ಗೌಪ್ಯತೆ ನಿಯಮದಿಂದಾಗಿ ಹೆಚ್ಚು ವಿವರ ನೀಡಲು ಸಾಧ್ಯವಿಲ್ಲ. ಅವರೀಗ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಸ್ಮಾರ್ಟ್ ತರಗತಿಗಳ ಯೋಜನೆಯಡಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಬೆಂಗಳೂರು, ಜೂ. ೨೩: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಉನ್ನತ ಶಿಕ್ಷಣ ಇಲಾಖೆ ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಜಿಟಲ್ ಕಲಿಕಾ ಯೋಜನೆಯಡಿ ೨೫೦೦ ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ.ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಿ ಕಾಲೇಜುಗಳಲ್ಲಿ ೨,೫೦೦ ತರಗತಿಗಳನ್ನು ಸ್ಮಾರ್ಟ್ ತರಗತಿ ಕೊಠಡಿಗಳಾಗಿ ಉನ್ನತೀಕರಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ೬,೫೦೦ ತರಗತಿ ಕೊಠಡಿಗಳನ್ನು ಸ್ಮಾರ್ಟ್ ತರಗತಿಗಳಾಗಿ ಪರಿವರ್ತಿಸಲಾಗುವುದು ಎಂದರು. ೨೦೨೧-೨೨ನೇ ಸಾಲಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಟ್ಯಾಬ್ಲೆಟ್ ಪಿ.ಸಿ. ನೀಡಲಾಗುವುದು ಎಂದು ತಿಳಿಸಿದರು. ಡಿಜಿಟಲ್ ಕಲಿಕೆ ಯೋಜನೆಯ ಮೂಲಕ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ೨೧ನೇ ಶತಮಾನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅವರನ್ನು ಸಿದ್ಧಗೊಳಿಸಲಾಗುತ್ತಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿರ್ಲಕ್ಷಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗದAತೆ, ಈ ಕಾರ್ಯಕ್ರಮ ಖಾತ್ರಿಪಡಿಸುತ್ತದೆ ಎಂದರು. ಆಧುನಿಕ ಬೋಧನೆ-ಕಲಿಕೆಗಳಿಗೆ ಪೂರಕವಾಗಿರಲಿದೆ. ಕೋವಿಡ್ ಸಾಂಕ್ರಾಮಿಕದಿAದ ಉಂಟಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳ ಕಲಿಕೆ ನಿರಾತಂಕವಾಗಿ ಮುಂದುವರಿಯಬೇಕು ಎನ್ನುವ ಉದ್ದೇಶದಿಂದ ಡಿಜಿಟಲ್ ಲರ್ನಿಂಗ್ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ ಎಂದರು.