ಚೆಟ್ಟಳ್ಳಿ, ಜೂ. ೨೨: ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಲಾರ್ ದೀಪ ಕೊಡುಗೆ ನೀಡಲಾಯಿತು.

ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಸ್ಥೆಯ ವತಿಯಿಂದ ಕೊಡುಗೆ ನೀಡುವ ಬಗ್ಗೆ ವಕೀಲರಾದ ಕೊಂಗೇಟಿರ ಬೋಪಯ್ಯ ಹಾಗೂ ಕೃಷ್ಣ ಬೋಪಯ್ಯ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರನ್ನು ಸಂಪರ್ಕಿಸಿದಾಗ ಸೋಲಾರ್ ದೀಪದ ಅವಶ್ಯಕತೆ ಇರುವ ಬಗ್ಗೆ ತಿಳಿಸಿದ ಮೇರೆಗೆ ಆರ್ಟ್ ಆಫ್ ಲಿವಿಂಗ್ ವತಿಯಿಂದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ಸೋಲಾರ್ ದೀಪವನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭ ಸಂಸ್ಥೆಯವರು ಹಾಗೂ ವಕೀಲರಾದ ಕೊಂಗೇಟಿರ ಬೋಪಯ್ಯ, ಪತ್ನಿ ಕೃಷ್ಣ ಬೋಪಯ್ಯ, ಚೆಟ್ಟಳ್ಳಿ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ, ವೈದ್ಯರಾದ ತೇಜಸ್ವಿನಿ, ಗೌತಮ್, ಆರೋಗ್ಯ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.