ಕೂಡಿಗೆ, ಜೂ. ೨೨: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಉಪ ಕಾಲುವೆಗಳು ಈಗಾಗಲೇ ಹೂಳು ತುಂಬಿಕೊAಡಿದ್ದು, ಕ್ರಮಕ್ಕೆ ರೈತರು ಆಗ್ರಹಿಸಿದ್ದಾರೆ. ಹಾರಂಗಿ ಮುಖ್ಯ ನಾಲೆಯ ಕಾಮಗಾರಿಗಳು ನಡೆದು ಮುಖ್ಯ ನಾಲೆಯಲ್ಲಿ ನೀರು ಹರಿಯಲು ಅನುಕೂಲ ಮಾಡಲಾಗುತ್ತಿದೆ. ಅದರೆ ವರ್ಷಂಪ್ರತಿಯAತೆ ಈ ಬಾರಿಯು ಉಪ ಕಾಲುವೆಗಳ ದುರಸ್ತಿ ಕಾರ್ಯ ನಡೆದು ಮುಂದಿನ ದಿನಗಳಲ್ಲಿ ಬೇಸಾಯ ಮಾಡಲು ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕೆAದು ಜಿಲ್ಲೆಯ ನೀರು ಬಳಕೆದಾರ ಸಂಘ ಆಗ್ರಹಿಸಿದೆ.

ಹಾರಂಗಿಯ ಅಣೆಕಟ್ಟೆಯ ಸಮೀಪದ ಒಂದನೆಯ ತೂಬುನಿಂದ ಕೊಡಗಿನ ಗಡಿ ಭಾಗ ಶಿರಂಗಾಲದ ಏಳನೇ ತೂಬುನವರಿಗೆ ಉಪ ಕಾಲುವೆಗಳ ದುರಸ್ತಿ ಕಾರ್ಯ ಆಗಬೇಕಾಗಿದೆ. ಸಂಬAಧಿಸಿದ ನೀರಾವರಿ ಇಲಾಖೆಯ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಉಪ ಕಾಲುವೆಯ ದುರಸ್ತಿ ಕಾರ್ಯ ಮಾಡಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.