ನವದೆಹಲಿ ಜೂನ್ ೨೨ : ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್, ಕೊಡಗು ಮೂಲದ ಚೇರಂಡ ಕಿಶನ್ ಅವರನ್ನು ಕಂಪೆನಿಯ ವಿತರಣೆ ಮತ್ತು ಅಂತರರಾಷ್ಟಿçÃಯ ವ್ಯವಹಾರದ ಉಸ್ತುವಾರಿಯನ್ನಾಗಿ ನೇಮಿಸಿದೆ. ಕೊಡಗು ಮೂಲದವರೊಬ್ಬರು ಮಾಧ್ಯಮ ರಂಗದಲ್ಲಿ ಇಷ್ಟೊಂದು ದೊಡ್ಡ ಹುದ್ದೆಗೆ ನೇಮಕ ಗೊಂಡಿರುವುದು ಇದೇ ಮೊದಲಾಗಿದೆ.

ವೀರಾಜಪೇಟೆ ತಾಲೂಕಿನ ಕುಂದಾ ಗ್ರಾಮದÀವರಾದ ಕಿಶನ್ ಅವರು ಈ ಹಿಂದೆ ಇಂಟರ್ನ್ಯಾಷನಲ್ (ವಾರ್ನರ್ ಮೀಡಿಯಾ) ವಿತರಣೆ ವಿಭಾಗದ ಮುಖ್ಯಸ್ಥ ರಾಗಿದ್ದರು. ವಿತರಣಾ ವಿಭಾಗದಲ್ಲಿ ೨೬ ವರ್ಷಗಳ ಅನುಭವ ಹೊಂದಿರುವ ಅವರು ಡಿಜಿಟಲ್ ಮತ್ತು ಪ್ರಸಾರ ವಿತರಣೆ ಮತ್ತು ನೆಟ್‌ವರ್ಕ್ ವಹಿವಾಟಿನಲ್ಲಿ ಆಳವಾದ ಜ್ಞಾನ ಮತ್ತು ಅನುಭವವನ್ನು ಹೊಂದಿದ್ದಾರೆ ಎಂದು ರಿಪಬ್ಲಿಕ್ ಮೀಡಿಯಾ ಪ್ರಕಟಣೆ ತಿಳಿಸಿದೆ. ಈ ಹಿಂದೆ ಅವರು ಪ್ರಮುಖ ಮಾಧ್ಯಮ ಸಂಸ್ಥೆಗಳಾದ ವಾರ್ನರ್ ಮೀಡಿಯಾ, ಟೆನ್ ಸ್ಪೋರ್ಟ್ಸ್, ವಯಾಕಾಮ್ ಮತ್ತು ಮೆನ್ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು.

ಪತ್ರಿಕೆಯೊಂದಿಗೆ ಮಾತನಾಡಿದ ಕಿಶನ್ ಅವರು ರಿಪಬ್ಲಿಕ್‌ನ ಭಾಗವಾಗಿರಲು ತಾವು ಹೆಮ್ಮೆ ಪಡುತ್ತೇನೆ ಎಂದರಲ್ಲದೆ ಕಂಪೆನಿಯು ಸಮರ್ಥ ನಾಯಕತ್ವ ಮತ್ತು ದೂರದೃಷ್ಟಿ ಹೊಂದಿದ್ದು ಕಂಪೆನಿಯ ಬೆಳವಣಿಗೆಯನ್ನು ಮುನ್ನಡೆಸಿ ಹೊಸ ಎತ್ತರಕ್ಕೆ ಏರಲು ತಾವು ಶ್ರಮಿಸುವುದಾಗಿ ಹೇಳಿದರು. ವಿದೇಶ ಗಳಲ್ಲಿ ರಿಪಬ್ಲಿಕ್ ಚಾನೆಲ್ ಪ್ರಾರಂಭಿಸಲು ಸೂಕ್ತ ಅವಕಾಶಗಳನ್ನು ಹುಡುಕುವುದು ಮತ್ತು ಸೃಷ್ಟಿಸುವುದು ತಮ್ಮ ಉದ್ಯೋಗದ ಭಾಗ ಎಂದು ಅವರು ಹೇಳಿದರು. ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರು ಕಳೆದ ವರ್ಷ ದೇಶದ ಪ್ರಾದೇಶಿಕ ಭಾಷೆಗಳಲ್ಲೂ ಚಾನೆಲ್ ಆರಂಭಿಸುವುದಾಗಿ ಹೇಳಿದ್ದರು. ಅದರಂತೆ ಬೆಂಗಾಲಿ ಭಾಷೆಯ ಚಾನೆಲ್ ಈಗಾಗಲೇ ಆರಂಭಗೊAಡಿದ್ದು ಇತರ ರಾಜ್ಯಗಳಲ್ಲೂ ಮಾರುಕಟ್ಟೆ ಅಧ್ಯಯನ ಮಾಡಲಾಗುತ್ತಿದೆ ಎಂದು ಕಿಶನ್ ತಿಳಿಸಿದರು.

ಕಿಶನ್ ಅವರ ಕುಟುಂಬವು ೧೯೬೯ ರಿಂದಲೇ ಬೆಂಗಳೂರಿನಲ್ಲಿ ನೆಲೆಸಿದ್ದರೂ ಕೊಡಗಿನೊಂದಿಗೆ ಅವಿನಾಭಾವ ಸಂಬAಧ ಹೊಂದಿದೆ. ಕೊಡವ ಕೌಟುಂಬಿಕ ಹಾಕಿ ಮತ್ತು ಕ್ರಿಕೆಟ್ ಪಂದ್ಯಾವಳಿಗಳಿಗೆ ಪ್ರತೀ ವರ್ಷವೂ ದೊಡ್ಡ ಮೊತ್ತದ ಕೊಡುಗೆಯನ್ನು ಒದಗಿಸುವಲ್ಲಿ ಕಿಶನ್ ಪಾತ್ರ ವಹಿಸಿದ್ದಾರೆ.

-ಕೋವರ್ ಕೊಲ್ಲಿ ಇಂದ್ರೇಶ್