ಚಲನಚಿತ್ರ-ಕಿರುತೆರೆ ರಂಗದವರಿಗೆ ಆರ್ಥಿಕ ನೆರವು

ಬೆಂಗಳೂರು, ಜೂ. ೨೨: ಕೋವಿಡ್-೧೯ನ ಎರಡನೇ ಅಲೆ ಹಿನ್ನೆಲೆ ಜಾರಿಯಾಗಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ಮುಖ್ಯಮಂತ್ರಿ ಅವರು ಘೋಷಿಸಿದ್ದ ಮೂರು ಸಾವಿರ ರೂಪಾಯಿ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ನೆರವಿಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಚಲನಚಿತ್ರ ರಂಗದವರು ಮತ್ತು ಕಿರುತೆರೆ ರಂಗದವರಿಗೆ ಆರ್ಥಿಕ ನೆರವನ್ನು ಆಧಾರ್ ಕಾರ್ಡ್ ಸಂಖ್ಯೆಯನ್ನು ಆಧರಿಸಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಅನುವಾಗುವಂತೆ ಸೇವಾಸಿಂಧು ವೆಬ್‌ಪೋರ್ಟಲ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕಿದೆ. ಅರ್ಜಿ ನಮೂನೆ ಮತ್ತು ಇನ್ನಿತರ ಷರತ್ತುಗಳಿಗಾಗಿ ತಿತಿತಿ.sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿಗೆ ಭೇಟಿ ನೀಡಿ ಪಡೆದುಕೊಳ್ಳಬಹುದು. ಒಬ್ಬರಿಗೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವವರು ಸಂಬAಧಿತ ಸಂಘಗಳಲ್ಲಿ ಸದಸ್ಯತ್ವ ಹೊಂದಿರಬೇಕು ಮತ್ತು ಅಲ್ಲಿಂದ ಕಡ್ಡಾಯವಾಗಿ ಶಿಫಾರಸ್ಸು ಪತ್ರ ಪಡೆದು ಅದನ್ನು ಸೇವಾಸಿಂಧು ಪೋರ್ಟಟಲ್‌ನಲ್ಲಿ ಅಪ್ಲೋಡ್ ಮಾಡಬೇಕಾಗಿದೆ. ಹಾಗೆಯೇ, ಚಲನಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವವರು ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಸಂಖ್ಯೆಯೊAದಿಗೆ ಚಲನಚಿತ್ರ ಮಂದಿರದ ಮಾಲೀಕರ ಪತ್ರದೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿಯು ೨೦೨೧ ರ ಜುಲೈ ೯ ರ ವರೆಗೆ ಸೇವಾಸಿಂಧು ಪೋರ್ಟಟಲ್‌ನಲ್ಲಿ ಲಭ್ಯವಿದೆ. ಆರ್ಥಿಕ ನೆರವಿನ ಅರ್ಜಿ ಇಲ್ಲವೇ ಶಿಫಾರಸ್ಸು ಪತ್ರಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಯಾವುದೇ ಕಚೇರಿಗಳಲ್ಲಿ ಸ್ವೀಕರಿಸಲಾಗುವುದಿಲ್ಲ. ಆರ್ಥಿಕ ನೆರವಿಗೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಲು, ತಾಂತ್ರಿಕ ಮಾರ್ಗದರ್ಶನದ ಅಗತ್ಯವಿದ್ದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಯ ಮೊಬೈಲ್ ಸಂಖ್ಯೆ ೮೯೦೪೬೪೫೫೨೯ ಅನ್ನು ಸಂಪರ್ಕಿಸಬಹುದು ಇಲ್ಲವೆ ಜಠಿmಜಿiಟm೧@gmಚಿiಟ.ಛಿomಗೆ ಇಮೇಲ್ ಮೂಲಕ ಪಡೆದುಕೊಳ್ಳಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.

ಭಾರತದಲ್ಲಿ ಇದುವರೆಗೆ ೨೨ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆ

ನವದೆಹಲಿ, ಜೂ. ೨೨: ದೇಶದಲ್ಲಿ ಇದುವರೆಗೆ ೨೨ ಡೆಲ್ಟಾ ಪ್ಲಸ್ ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ರೂಪಾಂತರಿ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಟ್ಟಾರೆ ಪತ್ತೆಯಾಗಿರುವ ೨೨ ರೂಪಾಂತರಿ ಡೆಲ್ಟಾ ಪ್ಲಸ್ ಪ್ರಕರಣಗಳ ಪೈಕಿ ೧೬ ಪ್ರಕರಣಗಳು ಮಹಾರಾಷ್ಟçದ ರತ್ನಾಗಿರಿ ಮತ್ತು ಜಲ್ಗಾಂವ್‌ನಲ್ಲಿ ಪತ್ತೆಯಾಗಿವೆ. ಇನ್ನುಳಿದ ಪ್ರಕರಣಗಳು ಮಧ್ಯಪ್ರದೇಶ ಮತ್ತು ಕೇರಳದಲ್ಲಿ ವರದಿಯಾಗಿದೆ ಎಂದು ಸರ್ಕಾರ ತಿಳಿಸಿದೆ. ಕೋವಿಡ್-೧೯ರ 'ಡೆಲ್ಟಾ-ಪ್ಲಸ್' ರೂಪಾಂತರಿಯನ್ನು ವಿಶ್ವ ಆರೋಗ್ಯ ಸಂಸ್ಥೆ 'ಕರಿಯಂಟ್ ಆಫ್ ಕನ್ಸರ್ನ್' ಎಂದು ವರ್ಗೀಕರಿಸಿದೆ. ಡೆಲ್ಟಾ-ಪ್ಲಸ್ 'ಡೆಲ್ಟಾ' ರೂಪಾಂತರದ ಸ್ವರೂಪವಾಗಿದ್ದು ಇದು ದೇಶದಲ್ಲಿ ಎರಡನೇ ಕೊರೊನಾ ಅಲೆಗೆ ಕಾರಣವಾಗಿತ್ತು. ಭಾರತದಲ್ಲಿ ಕೊರೊನಾ ೨ನೇ ಅಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ ೪೨,೬೪೦ ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು ಕಳೆದ ೯೧ ದಿನದಲ್ಲೇ ದೃಢಪಟ್ಟ ಕನಿಷ್ಟ ಸಂಖ್ಯೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ೧,೧೬೭ ಮಂದಿ ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ.

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್

ಶೇ. ೭೭.೮ರಷ್ಟು ಪರಿಣಾಮಕಾರಿ!

ನವದೆಹಲಿ, ಜೂ. ೨೨: ಮೂರನೇ ಹಂತದ ಪ್ರಾಯೋಗಿಕ ಪ್ರಯೋಗದಲ್ಲಿ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಶೇ. ೭೭.೮ ರಷ್ಟು ಪರಿಣಾಮ ಕಾರಿತ್ವವನ್ನು ತೋರಿಸಿದೆ. ದೇಶೀಯ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯನ್ನು ಕೊರೊನಾ ವಿರುದ್ಧದ ಹೋರಾಟದ ಉದ್ದೇಶವಾಗಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅನುಮೋದನೆ ನೀಡಿತ್ತು. ಲಸಿಕೆಯ ಮೂರನೇ ಹಂತದ ಡೇಟಾವನ್ನು ಸಲ್ಲಿಸುವಲ್ಲಿ ವಿಳಂಬ ವಾಗಿದ್ದರಿಂದ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿತ್ತು. ಈ ಹಿಂದಿನ ಎರಡು ಅಧ್ಯಯನಗಳು ಕೋವಾಕ್ಸಿನ್, ಕೋವಿಶೀಲ್ಡ್ಗಿಂತ ಕಡಿಮೆ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಎರಡು ಅಧ್ಯಯನಗಳು ಬಹಿರಂಗಗೊAಡ ಕೆಲ ದಿನಗಳ ನಂತರ ಕೋವ್ಯಾಕ್ಸಿನ್ ದತ್ತಾಂಶ ಬಿಡುಗಡೆಯಾಗುತ್ತಿದೆ. ಅನೇಕ ತಜ್ಞರು ಮೂರನೇ ಹಂತದ ಪ್ರಯೋಗ ನಡೆಯುವವರೆಗೂ ಎಚ್ಚರಿಕೆಯಿಂದಿರುವAತೆ ಜನತೆಯನ್ನು ಎಚ್ಚರಿಸಿದ್ದರು. ಪ್ರಸ್ತುತ ಭಾರತದಲ್ಲಿ ಬಳಸುತ್ತಿರುವ ಮೂರು ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು. ಇತರ ಎರಡು ಲಸಿಕೆಗಳು ಸೀರಮ್ ಇನ್ಸಿ÷್ಟಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಕೋವಿಶೀಲ್ಡ್ ಮತ್ತು ಡಾ. ರೆಡ್ಡೀಸ್ ತಯಾರಿಸುತ್ತಿರುವ ಸ್ಪುಟ್ನಿಕ್ ವಿ ಲಸಿಕೆ. ಭಾರತದಲ್ಲಿ ಇಲ್ಲಿಯವರೆಗೆ ೨೮ ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಭಾರತ್ ಬಯೋಟೆಕ್ ಜೂನ್‌ನಲ್ಲಿ ೨.೬ ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ನಿರೀಕ್ಷೆಯಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

೨.೧೪ ಕೋಟಿ ಪ್ರಮಾಣದ ಕೋವಿಡ್ ಲಸಿಕೆ ಲಭ್ಯ

ನವದೆಹಲಿ, ಜೂ. ೨೨: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ೨,೧೪,೯೦,೨೯೭ ಪ್ರಮಾಣದಷ್ಟು ಕೋವಿಡ್-೧೯ ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದ್ದು, ಮುಂದಿನ ಮೂರು ದಿನಗಳಲ್ಲಿ ೩೩,೮೦,೫೯೦ ಹೆಚ್ಚಿನವುಗಳನ್ನು ಸ್ವೀಕರಿಸಲಿವೆ ಎಂದು ಹೇಳಿದೆ. ಈವರೆಗೆ ಕೇಂದ್ರವು ರಾಜ್ಯಗಳಿಗೆ ೨೯,೩೫,೦೪,೮೨೦ ಪ್ರಮಾಣದಷ್ಟು ಲಸಿಕೆ ಪೂರೈಸಿದೆ. ಮಂಗಳವಾರ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು ೨೭,೨೦,೧೪,೫೨೩ ಪ್ರಮಾಣದಷ್ಟು ಬಳಕೆಯಾಗಿದೆ. ದೇಶದಲ್ಲಿ ಕಳೆದ ಒಂದು ದಿನದಲ್ಲಿ ಕೊರೊನಾ ಸೋಂಕಿನ ೪೨,೬೪೦ ಹೊಸ ಪ್ರಕರಣ ದಾಖಲಾಗಿದ್ದು, ೧,೧೬೭ ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು ೪೦,೩೬೬ ರಷ್ಟು ಇಳಿಕೆಯಾಗಿ ೬,೬೨,೫೨೧ ಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ೮೧,೮೩೯ ಜನರು ಮಾರಣಾಂತಿಕ ವೈರಸ್‌ನಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ ೨,೮೯,೨೬,೦೩೮ ಕ್ಕೆ ತಲುಪಿದೆ. ಸಾವಿನ ಪ್ರಮಾಣ ಶೇ. ೧.೩೦ ರಷ್ಟಿದೆ. ಏತನ್ಮಧ್ಯೆ, ಕೊರೊನಾ ಸೋಂಕು ಪತ್ತೆಗಾಗಿ ಈವರೆಗೆ ಒಟ್ಟು ೩೯,೪೦,೭೨,೧೪೨ ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ತಿಳಿಸಿದೆ. ಈ ಪೈಕಿ ೧೬,೬೪,೩೬೦ ಪರೀಕ್ಷೆಗಳನ್ನು ಸೋಮವಾರ ಪರೀಕ್ಷಿಸಲಾಗಿದೆ. ಭಾರತವು ಕಳೆದ ಒಂದು ದಿನದಲ್ಲಿ ೮೬,೧೬,೩೭೩ ಲಸಿಕೆ ಪ್ರಮಾಣವನ್ನು ನೀಡಿದ್ದು, ವಿಶ್ವದಲ್ಲೇ ಒಂದೇ ದಿನ ಈ ಪ್ರಮಾಣದ ಲಸಿಕೆ ನೀಡಿದ ದೇಶವೆನಿಸಿದ್ದು, ಒಟ್ಟು ವ್ಯಾಕ್ಸಿನೇಷನ್ ಸಂಖ್ಯೆ ೨೮,೮೭,೬೬,೨೦೧ ಕ್ಕೆ ಏರಿಕೆಯಾಗಿದೆ.

ಶಾಲೆಗಳನ್ನು ಆರಂಭಿಸಲು ಸರ್ಕಾರ ತರಾತುರಿಯಲ್ಲಿಲ್ಲ

ಬೆಂಗಳೂರು, ಜೂ. ೨೨: ರಾಜ್ಯದಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಪ್ರಾರಂಭಿಸಲು ಯಾವುದೇ ಆತುರ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಶಾಲಾ- ಕಾಲೇಜುಗಳನ್ನು ಹಂತ-ಹAತವಾಗಿ ತೆರೆಯಲು ಡಾ. ದೇವಿ ಪ್ರಸಾದ್ ನೇತೃತ್ವದ ಸಮಿತಿ ಸಲಹೆಗೆ ಪ್ರತಿಕ್ರಿಯಿಸಿದ ಡಾ. ಕೆ. ಸುಧಾಕರ್, ಶಾಲೆಗಳನ್ನು ಪ್ರಾರಂಭಿಸುವುದು ಬಹಳ ಸೂಕ್ಷö್ಮ ವಿಷಯ ಮತ್ತು ಸಾಕಷ್ಟು ಚಿಂತನೆಯ ನಂತರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ನಾವು ಸಮಿತಿಯ ಶಿಫಾರಸುಗಳನ್ನು ಚರ್ಚಿಸುತ್ತಿದ್ದೇವೆ. ಪ್ರತಿ ಕೋನವನ್ನು ಚರ್ಚಿಸಿದ ನಂತರವೇ ನಿರ್ಧಾರಕ್ಕೆ ಬರುತ್ತೇವೆ. ಸರ್ಕಾರ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗಮನವನ್ನು ಹೊಂದಿದೆ ಎಂದು ಅವರು ವಿವರಿಸಿದರು.