ಮಡಿಕೇರಿ, ಜೂ. ೨೨: ಮಡಿಕೇರಿ ನಗರದ ಎಸ್.ಪಿ ಬಂಗ್ಲೆ ಬಳಿಯ ತಡೆಗೋಡೆ ಕಾಮಗಾರಿ ಕಳೆದ ವರ್ಷದಿಂದಲೇ ನಡೆಯುತ್ತಿದೆ. ಇದೀಗ ಒಂದು ತಿಂಗಳ ಹಿಂದೆ ಚರಂಡಿ ಕಾಮಗಾರಿ ಸಂಬAಧ ರಸ್ತೆ ಅಗೆದು ಮಣ್ಣಿನ ಗುಡ್ಡೆ ನಿರ್ಮಿಸಿದ್ದು ಪ್ರಗತಿಯೇ ಕಾಣದೆ ತಿಂಗಳಿನಿAದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಈ ವ್ಯಾಪ್ತಿಯ ನಿವಾಸಿಗಳು ಸೀಲ್ಡೌನ್ ಅನುಭವಿಸುವಂತಾಗಿದೆ. ೫೦ ಮೀಟರ್ ಸಂಚರಿಸಿದರೆ ರಾಜಾಸೀಟು ರಸ್ತೆ ತಲುಪಬಹುದಿತ್ತು. ಆದರೆ ಇದೀಗ ೧ ಕಿ.ಮಿ ದಾರಿ ಬಳಸಿ ಹೊಸ ಬಡಾವಣೆ, ರೀಮಾಂಡ್ ಹೋಮ್ ಮೂಲಕ ಅಥವಾ ಹೊಟೇಲ್ ವ್ಯಾಲಿವ್ಯೂ ರಸ್ತೆಯ ಕೆಳಗಿರುವ ಮತ್ತೊಂದು ರಸ್ತೆಯ ಮೂಲಕ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರAತೂ ಪಾದಚಾರಿಗಳಿಗೂ ಅಪೂರ್ಣ ಚರಂಡಿ ದಾಟಲು ಅಸಾಧ್ಯ.