ಚೆಟ್ಟಳ್ಳಿ, ಜೂ. ೨೧: ಮೈಸೂರು ದಸರಾಕ್ಕೂ ಸೈ. ಪುಂಡಾನೆಗಳ ಎಡೆಮುರಿಕಟ್ಟಲು ಸೈ.. ಸಕಲೇಶಪುರದ ಬಾಳುಪೇಟೆ ಎಂಬಲ್ಲಿ ಒಂದೇದಿನ ಎರಡು ಪುಂಡಾನೆಗಳನ್ನು ಸೆರೆಹಿಡಿದು ಎಡೆಮುರಿಕಟ್ಟಿ ಅರಣ್ಯ ಇಲಾಖೆಗೆ ಒಪ್ಪಿಸಿ ತಿತಿಮತಿಯ ಮತ್ತಿಗೋಡು ಆನೆ ಶಿಬಿರಕ್ಕೆ ಹಿಂದಿರುಗಿದ ಮೈಸೂರಿನ ದಸರಾದ ಚಿನ್ನದ ಅಂಬಾರಿ ಹೊತ್ತು ಮೆರಗು ನೀಡುವ ಅಭಿಮನ್ಯು ಹಾಗೂ ಅರ್ಜುನ ಸೇರಿ ೫ ಸಾಕಾನೆಗಳ ಸಾಹಸದ ಕಾರ್ಯಾಚರಣೆ ಮೆಚ್ಚಲೇಬೇಕು. ಕೊಡಗಿನ ನೆರೆಯ ಜಿಲ್ಲೆೆಯಾದ ಹಾಸನದ ಸಕಲೇಶಪುರ ಸುತ್ತ ಹಲವು ಹಳ್ಳಿಗಳಲ್ಲಿ ೫ ಜನರನ್ನು ಬಲಿಪಡೆದು ಗ್ರಾಮದ ಜನತೆಗೆ ತೊಂದರೆ ನೀಡುತ್ತಿದ್ದ ೨ ಕಾಡಾನೆಗಳ ಬಂಧನಕ್ಕೆ ಅರಣ್ಯ ಇಲಾಖೆ ಸಜ್ಜುಗೊಂಡಿತು. ನಾಗರಹೊಳೆ ನೀಡುವ ಅಭಿಮನ್ಯು ಹಾಗೂ ಅರ್ಜುನ ಸೇರಿ ೫ ಸಾಕಾನೆಗಳ ಸಾಹಸದ ಕಾರ್ಯಾಚರಣೆ ಮೆಚ್ಚಲೇಬೇಕು. ಕೊಡಗಿನ ನೆರೆಯ ಜಿಲ್ಲೆÉಯಾದ ಹಾಸನದ ಸಕಲೇಶಪುರ ಸುತ್ತ ಹಲವು ಹಳ್ಳಿಗಳಲ್ಲಿ ೫ ಜನರನ್ನು ಬಲಿಪಡೆದು ಗ್ರಾಮದ ಜನತೆಗೆ ತೊಂದರೆ ನೀಡುತ್ತಿದ್ದ ೨ ಕಾಡಾನೆಗಳ ಬಂಧನಕ್ಕೆ ಅರಣ್ಯ ಇಲಾಖೆ ಸಜ್ಜುಗೊಂಡಿತು. ನಾಗರಹೊಳೆ ಕೈಜೋಡಿಸಿತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದೇದಿನ ಎರಡು ಪುಂಡಾನೆಗಳನ್ನು ಬಂಧಿಸಲು ಹರಸಾಹಸ ಪಡಬೇಕಾಯಿತು. ಅಭಿಮನ್ಯು ಹಗ್ಗದಿಂದ ಬಂಧಿಸಿ ದರೂ ಪುಂಡಾಟಿಕೆ ತೋರಿದ ಪುಂಡಾನೆಯನ್ನು ಹರಸಾಹಸಪಟ್ಟು ಎಳೆದು ತಂದು ನಿಯಂತ್ರಣಕ್ಕೆ ತರುವ ಮೂಲಕ ಲಾರಿಗೆ ಏರಿಸಲಾಯಿತು.
ದಸರಾದ ಆನೆಯೆಂದೇ ವಿಶ್ವವಿಖ್ಯಾತಿಗಳಿಸಿರುವ ಅಭಿಮನ್ಯು ಸಕಲೇಶಪುರದಲ್ಲಿ ಪುಂಡಾನೆಯನ್ನು ಸೆರೆಹಿಡಿದ ಸಾಹಸಮಯ ವೀಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ. ಇದೇ ಮೊದಲ ಬಾರಿಗೆ ಒಂದೇದಿನ ೨ ಪುಂಡಾನೆ ಗಳನ್ನು ಸೆರೆಹಿಡಿಯುವ ಕಾರ್ಯ ವನ್ನು ಮಾಡಲಾಗಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾ ಗಿದ್ದ ವೈದ್ಯ ಡಾ. ಮುಜೀಬ್ ರೆಹಮಾನ್ ಹೇಳು ತ್ತಾರೆ.
-ಕರುಣ್ ಕಾಳಯ್ಯ