ಮಡಿಕೇರಿ, ಜೂ.೨೧: ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿದ್ದ, ಇದೀಗ ವರ್ಗಾವಣೆಗೊಂಡಿರುವ ನೂರುನ್ನೀಸಾ ಅವರಿಗೆ ಮಡಿಕೇರಿ ತಾಲೂಕು ವಕೀಲರ ಸಂಘದ ಮಹಿಳಾ ವಕೀಲರ ವತಿಯಿಂದ ಬೀಳ್ಕೊಡಲಾಯಿತು. ನೂರುನ್ನೀಸಾ ಅವರ ಸೇವಾವಧಿಯಲ್ಲಿ ಕಾನೂನಿನ ಅರಿವು, ನೆರವು ಕೋರಿ ಬಂದವರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವುದರೊಂದಿಗೆ ಅನೇಕ ಕಿರಿಯ ಮಹಿಳಾ ವಕೀಲರಿಗೆ ಪ್ರಾಧಿಕಾರದ ಸೇವಾ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವದನ್ನು ಮಹಿಳಾ ವಕೀಲರು ಸ್ಮರಿಸಿಕೊಂಡರು.