ಕುಶಾಲನಗರ, ಜೂ. ೨೧: ಪೆಟ್ರೋಲಿಯಂ ಉತ್ಪನ್ನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ವಿನೂತನ ಪ್ರತಿಭಟನೆ ನಡೆಯಿತು. ಜಿಲ್ಲಾಧ್ಯಕ್ಷ ಎಂ. ಕೃಷ್ಣ ನೇತೃತ್ವದಲ್ಲಿ ಕುಶಾಲನಗರ ಗಣಪತಿ ದೇವಾಲಯದ ಮುಂಭಾಗ ೧೦೧ ತೆಂಗಿನಕಾಯಿ ಒಡೆದು ಪ್ರತಿಭಟನೆ ಸಲ್ಲಿಸಿದರು.

ದಿನನಿತ್ಯ ಲಕ್ಷಾಂತರ ಜನರು ಉಪಯೋಗಿಸುವ ವಸ್ತುಗಳ ಮತ್ತು ಅಡುಗೆ ಅನಿಲ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷರಾದ ಎಂ ಕೃಷ್ಣ ರವರ ನೇತೃತ್ವದಲ್ಲಿ ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಕುಶಾಲನಗರದ ನಗರದ ಹೃದಯ ಭಾಗದಲ್ಲಿ ಇರುವ ಗಣಪತಿ ದೇವಸ್ಥಾನದ ಮುಂಭಾಗ ೧೦೧ ತೆಂಗಿನಕಾಯಿ ಒಡೆದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು .ಈ ಸಂದರ್ಭದಲ್ಲಿ ಕೃಷ್ಣ ಮಾತನಾಡಿ ಪೆಟ್ರೋಲ್ ಬೆಲೆ ೨೦೦ ದಾಟಿದಲ್ಲಿ ೨೦೦ ಕಾಯಿಗಳನ್ನು ಒಡೆಯುತ್ತೇವೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಚಿಮ್ಮಲಿ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ವ್ಯಂಗ್ಯವಾಗಿ ನುಡಿದರು.ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.