ನೀಡಲು ಮನವಿ

ನಾಪೆೆÇÃಕ್ಲು, ಜೂ. ೨೧: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ನೀಡಬೇಕು ಎಂದು ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಭಕ್ತಜನ ಸಂಘದ ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ ಮನವಿ ಮಾಡಿದ್ದಾರೆ.

ಕೊಡವ ಸಂಪ್ರದಾಯದಲ್ಲಿ ಮೃತ ವ್ಯಕ್ತಿಗೆ ಪಿಂಡ ಪ್ರದಾನ ಮಾಡುವುದು ಸಂಸ್ಕೃತಿಯ ಭಾಗವಾಗಿದೆ. ವ್ಯಕ್ತಿ ಮೃತರಾದ ೪೮ ದಿನಗಳ ಒಳಗೆ ಅದನ್ನು ನೆರವೇರಿಸಲೇಬೇಕು. ಆದುದರಿಂದ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಪಡೆದುಕೊಂಡು ಪಿಂಡಪ್ರದಾನ ನಡೆಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.