ಮಡಿಕೇರಿ, ಜೂ. ೨೧: ೧೮ ವರ್ಷ ಮೇಲ್ಪಟ್ಟವರಿಗೆ ರಾಷ್ಟçದಾದ್ಯಂತ ತಾ.೨೧ ರಂದು ಸರಕಾರ ಉಚಿತ ಲಸಿಕೆ ನೀಡುವುದಾಗಿ ಕೆಲ ದಿನಗಳ ಹಿಂದಷ್ಟೆ ಪ್ರಧಾನಿ ಮೋದಿ ಘೋಷಿಸಿದ್ದರು. ಅದರಂತೆ ಇಂದು ಮಡಿಕೇರಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿನ ಲಸಿಕಾ ಕೇಂದ್ರಕ್ಕೆ ೧೮ ವರ್ಷ ಮೇಲ್ಪಟ್ಟ ಬಹಳಷ್ಟು ಮಂದಿ ಆಗಮಿಸಿದ್ದರು. ಆದರೆ ಉತ್ಸಾಹಿ ಯುವಕ-ಯುವತಿಯರಿಗೆ ಲಸಿಕೆ ನೀಡದ ಕಾರಣ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಕೇಂದ್ರ ಸರಕಾರ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕಾಗಿ ಆದೇಶಿಸಿದರೂ ತಮಗೆ ಲಸಿಕೆ ನೀಡುತ್ತಿಲ್ಲ ಎಂದು ಹಲವು ಮಂದಿ ಆಕ್ಷೇಪಿಸಿದರು. ಆರೋಗ್ಯ ಇಲಾಖೆ ಅವರೊಂದಿಗೆ ಮಾತುಕತೆಯೂ ನಡೆಯಿತು. ಬಳಿಕ ಕಲಾಕ್ಷೇತ್ರಕ್ಕೆ ಆಗಮಿಸಿದ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡ ಲಾಯಿತು. ೬೫ ವರ್ಷದ ವೃದ್ಧ ರೋರ್ವರು ೧ ಗಂಟೆಗಳ ಕಾಲ ಸಾಲಿನಲ್ಲಿ ನಿಂತಿದ್ದು ಕೋವ್ಯಾಕ್ಸಿನ್ ಎರಡನೆಯ ಡೋಸ್ ಪಡೆಯಬೇಕಿತ್ತು. ಆದರೆ ಕಲಾಕ್ಷೇತ್ರದಲ್ಲಿ ಕೋವಿಶೀಲ್ಡ್ ಮಾತ್ರ ಲಭ್ಯವಿದ್ದ ಕಾರಣ ಬೇಸರದಿಂದ ಹಿಂತೆರಳಿ ನಗರದ ಓಂಕಾರ ಸದನಕ್ಕೆ ತೆರಳಿ ಕೋವ್ಯಾಕ್ಸಿನ್ ಪಡೆದುಕೊಂಡರು. ಕನಿಷ್ಟ ಪಕ್ಷ ಒಂದು ಫಲಕ ಅಥವಾ ಘೋಷಣೆಗಳಾದರೂ ಮಾಡಿದ್ದರೆ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ವಾಗುತ್ತಿರಲಿಲ್ಲ ಎಂದು ಪತ್ರಿಕೆಯೊಂದಿಗೆ ಬೇಸರ ವ್ಯಕ್ತಪಡಿಸಿದರು.