ನಾಪೋಕ್ಲು, ಜೂ. ೨೧: ನಿರಂತರ ವಿದ್ಯುತ್ ಅಡಚಣೆಯಿಂದ ಸಮಸ್ಯೆ ಅನುಭವಿಸುತ್ತಿರುವ ನಾಪೋಕ್ಲು, ಕಕ್ಕಬ್ಬೆ, ಕುಂಜಿಲ ಮತ್ತು ಕೊಳಕೇರಿ ಗ್ರಾಮಸ್ಥರು ನಾಪೋಕ್ಲು ಚೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥ ಪಾಂಡAಡ ನರೇಶ್, ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸದ ಕಾರಣ ಮಳೆಗಾಲದಲ್ಲಿ ಈ ವಿಭಾಗಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನ ಸೆಳೆದರು ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ದೊರೆಯದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಭರತ್ ದೇವಯ್ಯ ಮಾತನಾಡಿ ಕಕ್ಕಬ್ಬೆ, ಬಲ್ಲಮಾವಟಿ ಭಾಗಕ್ಕೆ ನಿರಂತರ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಜನರು ತೊಂದರೆಯಲ್ಲಿ ಸಿಲುಕಿದ್ದಾರೆ. ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಗಳು ಮತ್ತು ಖಾಸಗಿ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ಇರುವುದರಿಂದ ವ್ಯತಿರಿಕ್ತ ಪರಿಣಾಮ ಬೀರಿದೆ. ವಿದ್ಯುತ್ ಸಮರ್ಪಕವಾಗಿ ಇಲ್ಲದಿದ್ದರು ಮಾಸಿಕ ಶುಲ್ಕ ಮಾತ್ರ ಸಾವಿರಾರು ರೂಪಾಯಿ ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಚೆಸ್ಕಾಂ ಕಿರಿಯ ಅಭಿಯಂತರ ಹರೀಶ್, ಕಕ್ಕಬ್ಬೆ - ಕುಂಜಿಲ, ಬಲ್ಲಮಾವಟಿ ಈ ವಿಭಾಗದ ಜನರ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪನ್, ಸದಸ್ಯರಾದ ಬಶೀರ್, ಕುಂಡAಡ ರಜಾಕ್, ಕುಡಿಯರ ರಾಜ, ಚಿಯಕಪೂವಂಡ ಶರೀನ್, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಕಾಟುಮಣಿಯಂಡ ಉಮೇಶ್, ಶಿವಚಾಳಿಯಂಡ ಪ್ರಸಾದ್ ತಿಮ್ಮಯ್ಯ, ಉದಯ ಶಂಕರ್, ಇಬು ಕುಂಜಿಲ, ಸೈದು ಕುಂಜಿಲ, ಅಶ್ರಫ್, ಮತ್ತಿತರರು ಇದ್ದರು.