*ಗೋಣಿಕೊಪ್ಪ, ಜೂ. ೨೧: ತಿತಿಮತಿ ನೊಖ್ಯ ಗ್ರಾಮದ ಶ್ರೀಕೃಷ್ಣ ಬಲರಾಮ ದೇವಸ್ಥಾನದ ಸಮೀಪ ಹುಲಿ ಹೆಜ್ಜೆ ಗೋಚರಿಸಿದೆ.
ದೇವಸ್ಥಾನ ಸಮೀಪದ ತೋಟದ ಮೂಲಕ ಹುಲಿ ಹಾದು ಹೋಗಿದ್ದು, ದೇವಸ್ಥಾನದ ಆವರಣದ ಸುತ್ತ ಹೆಜ್ಜೆ ಗುರುತುಗಳು ಕಂಡುಬAದಿವೆ. ದೇವಸ್ಥಾನದ ಸಮೀಪದಲ್ಲಿರುವ ಕೆರೆಯಲ್ಲಿ ನೀರು ಕುಡಿದು ಹೋಗಿದ್ದು, ಪಕ್ಕದಲ್ಲೇ ಇರುವ ಪಾಳು ಬಿದ್ದ ತೋಟದಲ್ಲಿ ಹುಲಿ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ತೋಟದ ಮಾಲೀಕ ಚೆಪುö್ಪಡೀರ ಕಾರ್ಯಪ್ಪ ಅವರು ಹುಲಿ ಹೆಜ್ಜೆ ಇರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ನಿರಂತರವಾಗಿ ತಿತಿಮತಿ ವ್ಯಾಪ್ತಿಯಲ್ಲಿ ಆನೆ ಹಾವಳಿಯಿಂದ ತತ್ತರಿಸಿ ಹೋಗಿರುವ ಜನಕ್ಕೆ ಇದೀಗ ಹುಲಿ ಹೆಜ್ಜೆ ಗುರುತು ಗೋಚರಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
-ಎನ್.ಎನ್. ದಿನೇಶ್