ಸೋಮವಾರಪೇಟೆ, ಜೂ. ೨೧: ಸಮೀಪದ ಐಗೂರು ಗ್ರಾಮದ ಜನವಸತಿ ಪ್ರದೇಶದಲ್ಲೇ ಕಾಡಾನೆ ಯೊಂದು ಓಡಾಡಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಹಗಲಿನ ವೇಳೆಯಲ್ಲೇ ಗ್ರಾಮದೊಳಗೆ ಪ್ರತ್ಯಕ್ಷವಾಗಿರುವ ಕಾಡಾನೆ, ಮನೆಗಳ ಮುಂಭಾಗ ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಿಂಬ್ಬAದಿಗಳು ಗ್ರಾಮಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಕಾಡಾನೆಯನ್ನು ಓಡಿಸಿದ್ದಾರೆ. ಕಾಫಿ ತೋಟದೊಳಗೆ ಕಾಡಾನೆ ಆಶ್ರಯ ಪಡೆದಿದ್ದು, ಅರಣ್ಯ ಇಲಾಖೆ ಕ್ರಮಕೈಗೊಂಡು ಕಾಡಿಗಟ್ಟಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಐಗೂರು, ಯಡವಾರೆ, ಕಾಜೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ಹಾನಿಯಾಗುತ್ತಿದೆ. ಕಾಡಾನೆ ನಿಯಂತ್ರಣಕ್ಕೆ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆAದು ಸ್ಥಳೀಯರಾದ ಕೆ.ಪಿ.ದಿನೇಶ್ ಒತ್ತಾಯಿಸಿದ್ದಾರೆ.