ಕಣಿವೆ, ಜೂ. ೨೧: ತಾನು ಅಂಗವೈಕಲ್ಯದಿAದ ಬಳಲುತ್ತಿದ್ದರೂ, ಕೊರೊನಾ ತಂದೊಡ್ಡಿರುವ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ಸಂಕಷ್ಟ ದಲ್ಲಿರುವ ಕುಟುಂಬಗಳಿಗೆ ನೆರವಾಗಿ ದ್ದಾರೆ ಕೂಡ್ಲೂರು ಗ್ರಾಮದ ವಿಶೇಷ ಚೇತನ ಮಹಿಳೆ ಕೆ.ಎನ್.ಮಂಜುಳ.

ವಿಶೇಷಚೇತನ ಮಹಿಳೆಯಾದ ಕಾರಣ ಸರ್ಕಾರ ನೀಡುವ ರೂ. ೧೫೦೦ ಮಾಸಿಕ ಭತ್ಯೆಯ ಹಣದಲ್ಲಿ ಒಂದಷ್ಟು ಪಾಲನ್ನು ಮೀಸಲಿಟ್ಟ ಮಂಜುಳಾ, ತನ್ನ ಗ್ರಾಮದಲ್ಲಿನ ಪರಿಶಿಷ್ಟ ವರ್ಗಕ್ಕೆ ಸೇರಿದ ೫೦ಕ್ಕೂ ಹೆಚ್ಚಿನ ಬಡಕುಟುಂಬಗಳಿಗೆ ಉಚಿತವಾಗಿ ಆಹಾರದ ಕಿಟ್‌ಗಳನ್ನು ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಕೊರೊನಾ ಎಂಬ ಸಂಕಷ್ಟದ ಸಮಯ ಎಲ್ಲಾ ವರ್ಗದ ಜನರ ನೆಮ್ಮದಿ ಕಸಿದುಕೊಂಡಿದೆ. ಅದರಲ್ಲೂ ಕಡು ಬಡತನದ ಅನೇಕ ಕುಟುಂಬಗಳ ಸ್ಥಿತಿ ಹೇಳತೀರದ್ದು. ನನಗೆ ಸರ್ಕಾರ ನೀಡುವ ಮಾಸಿಕ ಭತ್ಯೆಯಲ್ಲಿ ಉಳಿಸಿದ ಹಣ ದಿಂದ ೫೦ ಮಂದಿಗೆ ಏನಾದರೂ ಸಹಾಯ ಮಾಡ ಬೇಕೆಂದು ನನ್ನ ಸಹೋದರ ಕೆ. ಎನ್. ಪವನ್ ಕುಮಾರ್ ಜೊತೆ ಚರ್ಚಿಸಿದಾಗ, ಅವರು ಆಹಾರದ ಕಿಟ್‌ಗಳನ್ನು ಕೊಡುವ ಸಲಹೆ ನೀಡಿದರು. ಅಂತೆಯೇ ಆ ಒಂದು ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡಿದ ಆತ್ಮತೃಪ್ತಿ ನನಗಿದೆ ಎಂದು ಮಂಜುಳಾ ತಿಳಿಸಿದ್ದಾರೆ. ಈ ಸಂದರ್ಭ ಪವನ ಕುಮಾರ್, ಗಣೇಶ್, ಸುಕನ್ಯಾ ಮೊದಲಾದವರಿ ದ್ದರು.